ಹೊಸದಾಗಿ 29 ಸಿಆರ್ ಪಿಎಫ್ ಯೋಧರಿಗೆ ಕೊರೋನಾ: ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆ

ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ 29 ಸಿಆರ್ ಪಿಎಫ್ ಯೋಧರಿಗೆ  ಕೋವಿಡ್-19 ಸೋಂಕು ಸೋಮವಾರ ದೃಢಪಟ್ಟಿದೆ. ಈ ಮೂಲಕ ಭದ್ರತಾ ಪಡೆಯಲ್ಲಿನ ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆ ಆಗಿದೆ.
ಸಿಆರ್ ಪಿಎಫ್ ಯೋಧರು
ಸಿಆರ್ ಪಿಎಫ್ ಯೋಧರು

ನವದೆಹಲಿ:  ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ 29 ಸಿಆರ್ ಪಿಎಫ್ ಯೋಧರಿಗೆ  ಕೋವಿಡ್-19 ಸೋಂಕು ಸೋಮವಾರ ದೃಢಪಟ್ಟಿದೆ. ಈ ಮೂಲಕ ಭದ್ರತಾ ಪಡೆಯಲ್ಲಿನ ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆ ಆಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಆರ್ ಪಿಎಫ್ ಅಧಿಕಾರಿಗಳು, ಹೊಸದಾಗಿ 29 ಸಿಆರ್ ಪಿಎಫ್ ಯೋಧರಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 620ಕ್ಕೆ ಏರಿಕೆ ಆಗಿದೆ. ಈ ಪೈಕಿ 189 ಸಕ್ರಿಯವಾಗಿದ್ದು, 427 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕೊರೋನಾವೈರಸ್ ನಿಂದಾಗಿ ಈವರೆಗೂ ಸಿಆರ್ ಪಿಎಫ್ ನಲ್ಲಿ ನಾಲ್ವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com