ಅನಾಮಿಕ ಹಗರಣಗಳನ್ನು ತಡೆಯಲು ಯೋಗಿ ಸರ್ಕಾರದಿಂದ ಅಟೆಂಡೆನ್ಸ್ ಬೈ ಸೆಲ್ಫಿ ಅಳವಡಿಕೆ! 

ಉತ್ತರ ಪ್ರದೇಶದ ಕಸ್ತೂರಬಾ ಗಾಂಧಿ ಬಾಲಿಕ ವಿದ್ಯಾಲಯಗಳಲ್ಲಿ ’ಅನಾಮಿಕ’ ಹಗರಣಗಳನ್ನು ತಡೆಯಲು ಯೋಗಿ ಆದಿತ್ಯನಾಥ್ ಸರ್ಕಾರ ಅಟೆಂಡೆನ್ಸ್ ಬೈ ಸೆಲ್ಫಿ ಕ್ರಮ ಅಳವಡಿಕೆಗೆ ಮುಂದಾಗಿದೆ. 
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶದ ಕಸ್ತೂರಬಾ ಗಾಂಧಿ ಬಾಲಿಕ ವಿದ್ಯಾಲಯಗಳಲ್ಲಿ ’ಅನಾಮಿಕ’ ಹಗರಣಗಳನ್ನು ತಡೆಯಲು ಯೋಗಿ ಆದಿತ್ಯನಾಥ್ ಸರ್ಕಾರ ಅಟೆಂಡೆನ್ಸ್ ಬೈ ಸೆಲ್ಫಿ ಕ್ರಮ ಅಳವಡಿಕೆಗೆ ಮುಂದಾಗಿದೆ. 

ಶಿಕ್ಷಕಿಯೊಬ್ಬಳು ಏಕಕಾಲಕ್ಕೆ 25 ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿ, ಕೇವಲ 13 ತಿಂಗಳಲ್ಲಿ ಬರೋಬ್ಬರಿ ರೂ. 1 ಕೋಟಿ ವೇತನ ಪಡೆದಿರುವ ಅಚ್ಚರಿಯ ಘಟನೆ ವರದಿಯಾಗಿ ಉತ್ತರಪ್ರದೇಶದ ಕಸ್ತೂರಬಾ ಗಾಂಧಿ ಭಾಲಿಕಾ ವಿದ್ಯಾಲಯದಲ್ಲಿ ನಡೆಯುತ್ತಿರುವ ವಂಚನೆ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ಒಂದೇ ಹೆಸರಿನಲ್ಲಿ ಬೇರೆ ಬೇರೆ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿರುವುದು ವರದಿಯಾಗಿತ್ತು. ಈ ಬೆನ್ನಲ್ಲೇ ಇಂತಹ ವಂಚನೆಗಳನ್ನು ತಡೆಗಟ್ಟಲು ಯೋಗಿ ಸರ್ಕಾರ ಕ್ರಮ ಕೈಗೊಂಡಿದೆ. 

ಬೇಸಿಕ್ ಶಿಕ್ಷಾ ಅಧಿಕಾರಿ (ಬಿಎಸ್ಎ) ಗಳಿಗೆ ಕಳಿಸಲಾಗಿರುವ ಪತ್ರದಲ್ಲಿ ಸ್ಟಾಫ್ ಶಿಕ್ಷಕರು, ಶಿಕ್ಷಕರು, ವಾರ್ಡನ್ ಹಾಗೂ ಇತರ ಸಿಬ್ಬಂದಿಗಳು ಸೆಲ್ಫಿ ಕ್ಲಿಕ್ಕಿಸಿ ಪ್ರೇರಣಾ ಆಪ್ ಗೆ ಹಾಕುವುದನ್ನು ಕಡ್ಡಾಯಗೊಳಿಸಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ನಿರ್ದೇಶಕ ವಿಜಯ್ ಕಿರಣ್ ಆನಂದ್ ತಿಳಿಸಿದ್ದಾರೆ. ಸೆಲ್ಫಿ ಅಪ್ ಲೋಡ್ ಮಾಡುವುದನ್ನು ತಪ್ಪಿಸಿದರೆ, ಹಾಜರಾತಿ ಹಾಗೂ ದಿನದ ವೇತನವನ್ನು ಕಡಿತಗೊಳಿಸಲಾಗುಚುದು ಎಂದು ಎಚ್ಚರಿಕೆ ನೀಡಲಾಗಿದೆ. ಸೆಲ್ಫಿ ಕ್ಲಿಕ್ಕಿಸಿ ಅಪ್ ಲೋಡ್ ಮಾಡುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಕೆಜಿಬಿವಿ  ಕ್ಯಾಂಪಸ್ ನಲ್ಲಿ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com