ತೆಲಂಗಾಣ: ಮತ್ತೊಬ್ಬ ಟಿಆರ್ ಎಸ್ ಶಾಸಕನಿಗೆ ಕೊರೋನಾ ಪಾಸಿಟಿವ್

ತೆಲಂಗಾಣದ ಆಡಳಿತರೂಢ ಟಿಆರ್ ಎಸ್ ನ ಮತ್ತೊಬ್ಬ ಶಾಸಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಟಿಆರ್ ಎಸ್ ಸೋಂಕಿತರ ಶಾಸಕರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ತೆಲಂಗಾಣದ ಆಡಳಿತರೂಢ ಟಿಆರ್ ಎಸ್ ನ ಮತ್ತೊಬ್ಬ ಶಾಸಕರಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಟಿಆರ್ ಎಸ್ ಸೋಂಕಿತರ ಶಾಸಕರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಈ ಮುಂಚೆ ಪಾಸಿಟಿವ್ ಬಂದಿದ್ದ ಶಾಸಕರೊಂದಿಗೆ ಈ ಶಾಸಕರು ಸಂಪರ್ಕಕ್ಕೆ ಬಂದಿದ್ದರು ಎಂದು ಟಿಆರ್ ಎಸ್ ಮೂಲಗಳು ತಿಳಿಸಿವೆ.

ಕಳೆದ ವಾರ, ವಾರಂಗಲ್ ಜಿಲ್ಲೆಯ ಟಿಆರ್ ಎಸ್ ಶಾಸಕರೊಬ್ಬರಿಗೆ ಕೊರೋನಾ ಪಾಸಿಟಿ ದೃಢಪಟ್ಟಿತ್ತು. ಈಗ ಮತ್ತೊಬ್ಬ ಶಾಸಕರಿಗೆ ಪಾಸಿಟಿವ್ ಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಸಕರು ಮನಗೆ ಹೋಗಿ ಹೋಮ್ ಕ್ವಾರಂಟೈನ್ ನಲ್ಲಿರಬಹುದು. ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದ ಕೊರೋನಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com