ತಿರುಪತಿ 'ಟ್ರಯಲ್' ದರ್ಶನ ಪಡೆದಿದ್ದ ಭಕ್ತನಿಗೆ ಕೊರೋನಾ ಪಾಸಿಟಿವ್: ಸಂಪರ್ಕಕ್ಕೆ ಸಿಗದೇ ಸೋಂಕಿತ ನಾಪತ್ತೆ

ತಿರುಪತಿ ತಿರುಮಲ ದೇವಾಲಯದಲ್ಲಿ ದೇವರ ದರ್ಶನ ಪಡೆದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು. ತಿರುಮಲದ ಬಾಲಾಜಿ ನಗರದ ನಿವಾಸಿಯಾದ ಆತ ಕಾಣೆಯಾಗಿದ್ದಾನೆ.

Published: 16th June 2020 12:16 PM  |   Last Updated: 16th June 2020 12:41 PM   |  A+A-


Passengers maintain social distance while boarding a bus to Tirumala at

ತಿರುಪತಿಯಲ್ಲಿ ಭಕ್ತರ ಸಾಲು

Posted By : Shilpa D
Source : The New Indian Express

ತಿರುಮಲ: ತಿರುಪತಿ ತಿರುಮಲ ದೇವಾಲಯದಲ್ಲಿ ದೇವರ ದರ್ಶನ ಪಡೆದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು. ತಿರುಮಲದ ಬಾಲಾಜಿ ನಗರದ ನಿವಾಸಿಯಾದ ಆತ ಕಾಣೆಯಾಗಿದ್ದಾನೆ.

32 ವರ್ಷದ ವ್ಯಕ್ತಿಗಾಗಿ ತಿರುಮಲ ಮತ್ತು ತಿರುಪತಿಯಲ್ಲಿ ಶೋಧ ನಡೆಸಲಾಗುತ್ತಿದೆ.ಟಿಟಿಡಿಯ ಮೂರು ದಿನಗಳ ಪ್ರಯೋಗಾತ್ಮಕ ದರ್ಶನದಲ್ಲಿ ಆತ ದೇವರ ದರ್ಶನ ಪಡೆದಿದ್ದ.

ಬಾಲಾಜಿ ನಗರದ ವ್ಯಕ್ತಿ ಚೆನ್ನೈ ನ ಖಾಸಗಿ ಚಾನೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ,ಕಳೆದ 2 ತಿಂಗಳಿಂದ ತಿರುಮಲದಲ್ಲಿ ವಾಸವಿದ್ದ ಆತ, ಇತ್ತೀಚೆಗೆ ಚೈನ್ನೈ ಗೆ ಭೇಟಿ ನೀಡಿದ್ದ.

ಭಾನುವಾರ ಆತ ತಿರುಪತಿಗೆ ಬರುವಾಗ ಅಲಿಪಿರಿ ಚೆಕ್ ಪೋಸ್ಟ್ ನಲ್ಲಿ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿ ನೀಡಿದ್ದ. ಪರೀಕ್ಷೆ ವರದಿ ಬಂದಿದ್ದು ಕೊರೋನಾ ಪಾಸಿಟಿವ್ ಬಂದಿದೆ. ಕೂಡಲೇ ತಿರುಮಲ ಆರೋಗ್ಯಾಧಿಕಾರಿಗಳು ಆತನ ಮನೆಗೆ ದಾವಿಸಿದ್ದಾರೆ, ಆದರೆ ಆತ ಮನೆಯಲ್ಲೂ ಇಲ್ಲ, ಆತನನ್ನು ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲ, ಜೂನ್ 10 ರಂದು ಆತ ದರ್ಶನ ಪಡೆದಿದ್ದ.
 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp