ಉತ್ತರ ಪ್ರದೇಶ: ಕೋವಿಡ್-19 ಹರಡುವ ಭೀತಿಯಿಂದ ಸೋಂಕಿತ ಮಗುವಿನ ಜೊತೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ ತಾಯಿ!

ಕೋವಿಡ್-19 ಸೋಂಕು ತಗುಲಿದ 8 ವರ್ಷದ ಮಗುವಿನ ಜೊತೆ ಆಸ್ಪತ್ರೆಗೆ ಹೋಗಲು, ಸೋಂಕು ಹರಡುವ ಭೀತಿಯಿಂದ ಆ ಮಗುವಿನ ತಾಯಿ ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದ ಸೂರಜ್ ಕುಂಡ್ ನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗೋರಖ್ ಪುರ: ಕೋವಿಡ್-19 ಸೋಂಕು ತಗುಲಿದ 8 ವರ್ಷದ ಮಗುವಿನ ಜೊತೆ ಆಸ್ಪತ್ರೆಗೆ ಹೋಗಲು, ಸೋಂಕು ಹರಡುವ ಭೀತಿಯಿಂದ ಆ ಮಗುವಿನ ತಾಯಿ ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದ ಸೂರಜ್ ಕುಂಡ್ ನಲ್ಲಿ ನಡೆದಿದೆ. 

ಕೋವಿಡ್-19 ಸೋಂಕಿತ ಮಗುವಿನಿಂದ ತಮಗೂ ಕೊರೋನಾ ಸೋಂಕು ಹರಡುತ್ತದೆ ಎಂಬ ಭಯದಿಂದ ಮಗುವಿನ ತಾಯಿ ಆಸ್ಪತ್ರೆಗೆ ಹೋಗುವುದಕ್ಕೆ ನಿರಾಕರಿಸಿದ್ದರು ಎಂದು ಗೋರಖ್ ಪುರದ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಶ್ರೀಕಾಂತ್ ತಿವಾರಿ ವರದಿಗಾರರಿಗೆ ತಿಳಿಸಿದ್ದಾರೆ.  
 
ಕುಟುಂಬ ಸದಸ್ಯರು ಇಲ್ಲದೇ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸುವುದು ಕಷ್ಟವಾಗಿತ್ತು. ಇದಕ್ಕಾಗಿಯೇ ನಮ್ಮ ತಂಡದ ಸದಸ್ಯರು ಮಗುವಿನ ಮನೆಗೆ ತೆರಳಿ ಆಕೆಯ ತಾಯಿಗೆ ಮನವರಿಕೆ ಮಾಡಿಕೊಟ್ಟರು. ಕೋವಿಡ್-19 ಕುರಿತಾದ ಮಾಹಿತಿ ನೀಡಿ ಮಗುವಿನ ತಾಯಿಗೆ ಮನವರಿಕೆ ಮಾಡಿದ ನಂತರ ಆಕೆ ಆಸ್ಪತ್ರೆಗೆ ಬರಲು ಒಪ್ಪಿದರು, ಸೋಂಕಿತ ಮಗುವಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಎಂಒ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com