ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ: ಮೂವರು ಶಾಸಕರಿಂದ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ

ಮಣಿಪುರದಲ್ಲಿ ಬಿಜೆಪಿ ಸರ್ಕಾರ ಪತನವಾಗುವ ಹಂತಕ್ಕೆ ತಲುಪಿದ್ದು, ಬಿಜೆಪಿಯ ಮೂವರು ಸೇರಿ ಒಂಬತ್ತು ಶಾಸಕರು, ಎನ್ ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‍ ಪಡೆದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ಬಿರೇನ್ ಸಿಂಗ್
ಬಿರೇನ್ ಸಿಂಗ್

ಇಂಫಾಲ್: ಮಣಿಪುರದಲ್ಲಿ ಬಿಜೆಪಿ ಸರ್ಕಾರ ಪತನವಾಗುವ ಹಂತಕ್ಕೆ ತಲುಪಿದ್ದು, ಬಿಜೆಪಿಯ ಮೂವರು ಸೇರಿ ಒಂಬತ್ತು ಶಾಸಕರು, ಎನ್ ಬಿರೇನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‍ ಪಡೆದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಮೂವರು ಬಿಜೆಪಿ ಶಾಸಕರು ಈಗಾಗಲೇ ಶಾಸಕ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.

ಬಿಜೆಪಿ ಶಾಸಕರಾದ ಎಸ್. ಸುಭಾಷ್​ಚಂದ್ರ ಸಿಂಗ್, ಟಿ.ಟಿ. ಹಾವೋಕಿಪ್ ಮತ್ತು ಸ್ಯಾಮುಯೆಲ್ ಜೇಂಡಾಯ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಭಾಗವಾಗಿದ್ದ ಎನ್​ಪಿಪಿಯ ನಾಲ್ವರು ಹಾಗೂ ಟಿಎಂಸಿ ಓರ್ವ ಶಾಸಕ ಮತ್ತು ಪಕ್ಷೇತರ ಶಾಸಕರೊಬ್ಬರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದು, ಕಾಂಗ್ರೆಸ್ ಗೆ ಬೆಂಬಲ ಘೋಷಿಸಿದ್ದಾರೆ.

ಒಂಬತ್ತು ಶಾಸಕರ ಬಲ ಕಳೆದುಕೊಂಡ ಬಿಜೆಪಿ ಸರ್ಕಾರ ಈಗ ಅಲ್ಪ ಮತಕ್ಕೆ ಕುಸಿದಿದ್ದು, 60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ಬಲ 23ಕ್ಕೆ ಇಳಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com