ನಾವು ದುರ್ಬಲತೆ ತೋರಿದಷ್ಟು ಚೀನಾ ಪ್ರತಿಕ್ರಿಯೆ ಹೆಚ್ಚು ಆಕ್ರಮಣಕಾರಿಯಾಗಿರುತ್ತದೆ: ಕ್ಯಾಪ್ಟನ್ ಅಮರೀಂದರ್ ಸಿಂಗ್
ಲಡಾಖ್ ಗಡಿಭಾಗದಲ್ಲಿ ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿ 20 ಯೋಧರನ್ನು ಬಲಿ ಪಡೆದ ಚೀನಾ ಸೈನಿಕರ ಕೃತ್ಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
Published: 17th June 2020 08:52 AM | Last Updated: 17th June 2020 12:04 PM | A+A A-

ಅಮರೀಂದರ್ ಸಿಂಗ್
ನವದೆಹಲಿ: ಲಡಾಖ್ ಗಡಿಭಾಗದಲ್ಲಿ ಭಾರತೀಯ ಸೇನೆ ಮೇಲೆ ಗುಂಡಿನ ದಾಳಿ ನಡೆಸಿ 20 ಯೋಧರನ್ನು ಬಲಿ ಪಡೆದ ಚೀನಾ ಸೈನಿಕರ ಕೃತ್ಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಗಡಿಯಲ್ಲಿ ಭಾರತೀಯ ಯೋಧರು ಅಧರ್ಮ ಯುದ್ಧವನ್ನು ಎದುರಿಸುತ್ತಿದ್ದಾರೆ, ಗಡಿ ಭಾಗವನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ನಮ್ಮ ಸೈನಿಕರು ಆಗಾಗ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ. ಚೀನಾದ ಗಡಿತಂಡೆ ಮುಂದುವರೆದ ಭಾಗವಾಗಿದ್ದು, ಗಡಿ ಉಲ್ಲಂಘನೆಯ ಎದುರು ಇಡೀ ದೇಶವೇ ಸೆಟೆದು ನಿಲ್ಲಬೇಕಾಗ ಸಮಯ ಇದೀಗ ಬಂದಿದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಚೀನಾ ಉದ್ಧಟತನವನ್ನು ಪ್ರದರ್ಶಿಸಿದ್ದು. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಸಮಯ ಬಂದಿದೆ. ನಮ್ಮ ದೌರ್ಬಲ್ಯ ವ್ಯಕ್ತವಾದಷ್ಟು ಚೀನಾ ಪ್ರತಿಕ್ರಿಯೆ ಹೆಚ್ಚು ಆಕ್ರಮಣಕಾರಿಯಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.