ಕೋವಿಡ್ ಪರಿಣಾಮ 202-21 ನೇ ಸಾಲಿನಲ್ಲಿ ಅಧಿಕಾರಿಗಳಿಗೆ ವಿದೇಶ ತರಬೇತಿ ರದ್ದು!

ಕೋವಿಡ್-19 ಪರಿಣಾಮವಾಗಿ ಅದಧಿಕಾರಿಗಳನ್ನು ವಿದೇಸಶಕ್ಕೆ ಕಳುಹಿಸಿ ತರಬೇತಿ ನೀಡಲಾಗುವ ಎಂದಿನ ಪರಿಪಾಠಕ್ಕೆ ಬ್ರೇಕ್ ಬಿದ್ದಿದೆ.
ಕೋವಿಡ್ ಪರಿಣಾಮ 202-21 ನೇ ಸಾಲಿನಲ್ಲಿ ಅಧಿಕಾರಿಗಳಿಗೆ ವಿದೇಶ ತರಬೇತಿ ರದ್ದು!
ಕೋವಿಡ್ ಪರಿಣಾಮ 202-21 ನೇ ಸಾಲಿನಲ್ಲಿ ಅಧಿಕಾರಿಗಳಿಗೆ ವಿದೇಶ ತರಬೇತಿ ರದ್ದು!

ನವದೆಹಲಿ: ಕೋವಿಡ್-19 ಪರಿಣಾಮವಾಗಿ ಅದಧಿಕಾರಿಗಳನ್ನು ವಿದೇಸಶಕ್ಕೆ ಕಳುಹಿಸಿ ತರಬೇತಿ ನೀಡಲಾಗುವ ಎಂದಿನ ಪರಿಪಾಠಕ್ಕೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ತನ್ನ ವ್ಯಾಪ್ತಿಗೆ ಬರುವ ಇಲಾಖೆಗಳಿಗೆ ಮಾಹಿತಿ ರವಾನಿಸಿದ್ದು, 2020-21 ನೇ ಸಾಲಿನಲ್ಲಿ ಅದಧಿಕಾರಿಗಳಿಗೆ ವಿದೇಸಶ ತರಬೇತಿಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿದೆ.

ಸಿಬ್ಬಂದಿ ಮತ್ತು ತರಬೇತಿ (ಡಿಒಪಿಟಿ) ಕೇಡರ್ ಕಂಟ್ರೋಲಿಂಗ್ ವಿಭಾಗ, ಕೇಂದ್ರ ತರಬೇತಿ ಇನ್ಸ್ಟಿಟ್ಯೂಟ್ ಗಳು ತನ್ನ ವ್ಯಾಪ್ತಿಗೆ ಬರುವ ಅಧಿಕಾರಿಗಳಿಗೆ ವಿದೇಶಿ ತರಬೇತಿಯನ್ನು ಒಟ್ಟಾರೆ ತರಬೇತಿಯ ಭಾಗವಾಗಿಸಿಕೊಂಡಿದೆ. ಆದರೆ ಈ ಬಾರಿ ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ಅದರ ಪರಿಣಾಮವಾಗಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಧಿಕಾರಿಗಳನ್ನು ವಿದೇಶಕ್ಕೆ ಕಳುಹಿಸಿ ತರಬೇತಿ ಕೊಡಿಸುವುದನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ವಿದೇಶಕ್ಕೆ ಕಳಿಸಿ ತರಬೇತಿ ಕೊಡಿಸುವುದಾದರೆ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಅಧಿಕಾರಿಗಳಿಗೆ ವಿದೇಶ ತರಬೇತಿ ಕೊಡಿಸುವುದಕ್ಕಾಗಿ ಹಾಗೂ ಇನ್ನಿತರ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ ಈ ಬಾರಿಯ ಬಜೆಟ್ ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನಿರ್ಮಲಾ ಸೀತಾರಾಮನ್ 238.45 ಕೋಟಿ ಅನುದಾನ ಘೋಷಿಸಿದ್ದರು. ಈ ಪೈಕಿ 83.45 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ದೆಹಲಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಸೆಕ್ರೆಟೇರಿಯೆಟ್ ಟ್ರೈನಿಂಗ್ ಹಾಗೂ ಮ್ಯಾನೇಜ್ಮೆಂಟ್ (ಐಎಸ್ ಟಿಎಂ) ನ ಸ್ಥಾಪನೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಗೆ ಬಳಕೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com