ಲಡಾಖ್ ಗಡಿಯಲ್ಲಿ ಚೀನಾ ಹತ್ಯಾಕಾಂಡ: ಗಡಿಯಲ್ಲಿ ಮೂರೂ ಸೇನೆ ಹೈ ಅಲರ್ಟ್

ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ ಚೀನಾ ರಾಷ್ಟ್ರದೊಂದಿಗೆ ಹೊಂದಿಕೊಂಡಿರುವ 3500 ಕಿಮೀ ಗಡಿ ಪ್ರದೇಶದ ಮುಂಚೂಣಿ ಪ್ರದೇಶಗಳಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಗಳು ಸನ್ನದ್ಧ ಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸೇನೆಯನ್ನು ರವಾನಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ ಚೀನಾ ರಾಷ್ಟ್ರದೊಂದಿಗೆ ಹೊಂದಿಕೊಂಡಿರುವ 3500 ಕಿಮೀ ಗಡಿ ಪ್ರದೇಶದ ಮುಂಚೂಣಿ ಪ್ರದೇಶಗಳಲ್ಲಿ ಭೂಸೇನೆ, ವಾಯುಪಡೆ, ನೌಕಾಪಡೆಗಳು ಸನ್ನದ್ಧ ಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸೇನೆಯನ್ನು ರವಾನಿಸಲಾಗಿದೆ. 

ಮತ್ತೊಂದೆಡೆ ಹಿಂದೂಮಹಾಸಾಗರ ಪ್ರದೇಶದಲ್ಲಿ ಚೀನಾ ನೌಕಾಪಡೆ ಆಗಾಗ್ಗೆ ಬಂದು ಹೋಗುವ ಪ್ರದೇಶಗಳಲ್ಲಿ ನೌಕಾಪಡೆಗಳ ಸನ್ನದ್ಧ ಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. 

ರಕ್ಷಣಾ ಸಚಿವ ರಾಜನಾಥ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಡುವಣ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಮತ್ತೊಂದೆಡೆ ಅರುಣಾಚಲಪ್ರದೇಶ, ಹಿಮಾಚಲಪ್ರದೇಶ, ಉತ್ತರಾಖಂಡ ಮತ್ತು ಲಡಾಖ್ ನಲ್ಲಿನ ಮುಂಚೂಣಿ ಸೇನಾ ಪ್ರದೇಶಗಳಿಗೆ ಹೆಚ್ಚಿನ ಯೋಧರನ್ನು ರವಾನಿಸುವ ಮೂಲಕ ಪರಿಸ್ಥಿತಿ ಎದುರಿಸಲು ಸೇನೆ ಸಿದ್ಧತೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com