ರಾಹುಲ್ ಗಾಂಧಿ ದೇಶದ ಅತ್ಯಂತ  ಬೇಜವಾಬ್ದಾರಿಯುತ ರಾಜಕಾರಣಿ: ಬಿಜೆಪಿ

ಲಡಾಖ್ ನಲ್ಲಿ ಚೀನಾ ಸೇನಾಪಡೆಗಳೊಂದಿಗಿನ ಸಂಘರ್ಷದಲ್ಲಿ ಭಾರತೀಯ ಯೋಧರ ಬಲಿದಾನವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶದ ಅತ್ಯಂತ ಬೇಜಬ್ದಾರಿಯುತ ರಾಜಕಾರಣಿಯಾಗಿದ್ದಾರೆ ಎಂದು ಬಿಜೆಪಿ ಬಣ್ಣಿಸಿದೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಲಡಾಖ್ ನಲ್ಲಿ ಚೀನಾ ಸೇನಾಪಡೆಗಳೊಂದಿಗಿನ ಸಂಘರ್ಷದಲ್ಲಿ ಭಾರತೀಯ ಯೋಧರ ಬಲಿದಾನವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶದ ಅತ್ಯಂತ ಬೇಜಬ್ದಾರಿಯುತ ರಾಜಕಾರಣಿಯಾಗಿದ್ದಾರೆ ಎಂದು ಬಿಜೆಪಿ ಬಣ್ಣಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ಗಡಿ ವಿವಾದ ಕುರಿತಂತೆ ಚರ್ಚಿಸಲು ಶುಕ್ರವಾರ ಸರ್ವ ಪಕ್ಷ ಸಭೆಯನ್ನು ಸರ್ಕಾರ ಈಗಾಗಲೇ ಕರೆದಿರುವಾಗ ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಅಪ್ರಬುದ್ಧ, ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಯೋಧರನ್ನು ನಿರಾಯುಧರನ್ನಾಗಿ ಕಳುಹಿಸಿದ್ದೇಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು.ಈ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಸಂಬೀತ್ ಪಾತ್ರ, ರಾಹುಲ್ ಗಾಂಧಿಯಂತಹ ರಾಜಕಾರಣಿಯನ್ನು ದೇಶ ನೋಡಿಲ್ಲ, ಓದಿ , ತಿಳಿದು ನಂತರ ಮಾತನಾಡಿ, ನಿಮನ್ನು ರಾಜಕೀಯಕ್ಕೆ ತಂದಿರುವ ನಿಮ್ಮ ಸ್ವಂತ ದೇಶದ ವಿರುದ್ಧವಾಗಿ ತಪ್ಪು ಸಂದೇಶ ನೀಡುವಂತಹ ಹೇಳಿಕೆಗಳನ್ನು ನೀಡಬೇಡಿ ಎಂದು ಸಂಬೀತ್ ಪಾತ್ರ ನುಡಿದರು.

 ಮೂರು 'ಸಿ' ಗಳಾದ ಕೊರೋನಾ, ಚೀನಾ ಮತ್ತು ಕಾಂಗ್ರೆಸ್ ವಿರುದ್ಧ ದೇಶ ಹೋರಾಡುತ್ತಿದ್ದು, ಗೆಲುವು ಸಾಧಿಸಲಿದೆ. ಪ್ರಧಾನಿ ಸಾಮಾನ್ಯ ವ್ಯಕ್ತಿಯಲ್ಲ, ಇಡೀ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.ಪ್ರಚಾರ ಹಾಗೂ ತಪ್ಪು ಮಾಹಿತಿ ನೀಡುವ ರಾಜಕೀಯವನ್ನು ರಾಹುಲ್ ಗಾಂಧಿ ನಿಲ್ಲಿಸಬೇಕಾಗಿದೆ.ಇವುಗಳನ್ನು ನಿಲ್ಲಿಸದಿದ್ದರೆ ರಾಹುಲ್ ಗಾಂಧಿಯನ್ನು ದೇಶ ಕ್ಷಮಿಸಲ್ಲ ಎಂದರು.

2008ರಲ್ಲಿ ಕಾಂಗ್ರೆಸ್ ಮತ್ತು ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ನಡುವಣ ಆಗಿದ್ದ ಒಪ್ಪಂದದ ಮಾಹಿತಿಯನ್ನು ಸೋನಿಯಾ ಹಾಗೂ ರಾಹುಲ್ ಗಾಂಧಿ ಒದಗಿಸಬೇಕು ಎಂದು ಸಂಬೀತ್  ಪಾತ್ರ ಆಗ್ರಹಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com