ಕೊರೋನಾ ಎಫೆಕ್ಟ್: ಪುರಿ ಜಗನ್ನಾಥ ರಥ ಯಾತ್ರೆಗೆ 'ಸುಪ್ರೀಂ' ಬ್ರೇಕ್!

ಒಡಿಶಾದ ಪುರಿಯಲ್ಲಿ ಪ್ರತೀವರ್ಷ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ಯಾತ್ರೆಗೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಒಡಿಶಾದ ಪುರಿಯಲ್ಲಿ ಪ್ರತೀವರ್ಷ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ಯಾತ್ರೆಗೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ. 

ಪ್ರಸಕ್ತ ಸಾಲಿನ ಜಗನ್ನಾಥ ರಥ ಯಾತ್ರೆ ನಡೆದರೆ ಸಾರ್ವಜನಿಕ ಆರೋಗ್ಯ ಅಪಾಯಕ್ಕೆ ಸಿಲುಕಲಿದೆ ಎಂದು ಹೇಳಿ ಒಡಿಶಾದ ಎನ್'ಜಿಒ ಸಂಸ್ಥೆಯೊಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. 

ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯ, ಜಗನ್ನಾಥ ಯಾತ್ರೆಯಲ್ಲಿ ರಥೆ ಎಳೆಯಲಾಗುತ್ತದೆ. ಈ ವೇಳೆ ಜನರಿಂದ ಜನರಿಗೆ ಸಂಪರ್ಕ ಹೆಚ್ಚಾಗುತ್ತದೆ. ಇದರಿಂದ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾದಂತಾಗುತ್ತದೆ. ಜನರ ಆರೋಗ್ಯ ಹಾಗೂ ಸುರಕ್ಷತಾ ಸೃಷಅಟಿಯಿಂದ ಪ್ರತೀ ವರ್ಷ ನಡೆಯುತ್ತಿದ್ದ ಜಗನ್ನಾಥ ಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಈ ವೇಳೆ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು, ಯಾತ್ರೆಗೆ ಸಂಪೂರ್ಣ ನಿಷೇಧ ಹೇರದೆ, ಸಾರ್ವಜನಿಕರು ಪಾಲ್ಗೊಳ್ಳದಂತೆ ದೇವಾಲಯದ ಸಂಪ್ರದಾಯಗಳನ್ನು ಮುಂದುವರೆಸಲು ಅನುಮತಿ ನೀಡುವಂತೆ ಮನವಿ ಮಾಡಿಕೊಂಡರು. 

ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ, ಈ ಬಗ್ಗೆ ನಮಗೆ ಸಾಕಷ್ಟು ಅನುಭವಗಳಿವೆ. ಸಾಂಪ್ರದಾಯಿಕ ಚಟುವಟಿಕೆಗಳಿಗೆ ಅನುಮತಿ ನೀಡಿದ್ದೇ ಆದರೆ, ಅಲ್ಲಿ ಜನರು ಸೇರುವುದು ಸಾಮಾನ್ಯವಾಗುತ್ತದೆ. ಪ್ರಸ್ತುತ ಇರುವ ಕಠಿಣ ಪರಿಸ್ಥಿತಿಯಲ್ಲಿ ನಾವು ಯಾತ್ರೆಗೆ ಅವಕಾಶ ನೀಡಿದ್ದೇ ಆದರೆ, ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com