ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ವಿಡಿಯೋ ಕಾನ್ಫೆರೆನ್ಸ್ ಮೂಲಕ ಅಡ್ವಾನಿ, ಜೋಷಿ ಕೋರ್ಟ್‌ ಮುಂದೆ ಹಾಜರು!

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾನಿ, ಮಾಜಿ ಕೇಂದ್ರ ಸಚಿವ ಎಂಎಂ ಜೋಷಿ ಅವರು ವಿಡಿಯೋ ಕಾನ್ಫೆರನ್ಸ್ ಮೂಲಕ ಇದೇ ತಿಂಗಳ ಕೊನೆಯಲ್ಲಿ ವಿಶೇಷ ಸಿಬಿಐ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.
ಉಮಾ ಭಾರತಿ-ಅಡ್ವಾಣಿ-ಜೋಷಿ
ಉಮಾ ಭಾರತಿ-ಅಡ್ವಾಣಿ-ಜೋಷಿ

ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾನಿ, ಮಾಜಿ ಕೇಂದ್ರ ಸಚಿವ ಎಂಎಂ ಜೋಷಿ ಅವರು ವಿಡಿಯೋ ಕಾನ್ಫೆರನ್ಸ್ ಮೂಲಕ ಇದೇ ತಿಂಗಳ ಕೊನೆಯಲ್ಲಿ ವಿಶೇಷ ಸಿಬಿಐ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. 

1992ರ ಡಿಸೆಂಬರ್ 6ರ ಸಂಜೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದಿತ್ತು. ಈ ಪ್ರಕರಣ ಸಂಬಂಧ ಎಲ್ ಕೆ ಅಡ್ವಾನಿ, ಎಂಎಂ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಮತ್ತು ಮಹಾಂತ್ ಗೋಪಾಲ್ ದಾಸ್ ಅವರಿಗೆ ಜೂನ್ ಅಥವಾ ಜುಲೈನಲ್ಲಿ ಕೋರ್ಟ್ ಮುಂದೆ ಹಾಜರಾಗುವಂತೆ ಲಖನೌ ವಿಶೇಷ ಸಿಬಿಐ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. 

ಅದರಂತೆ ಜೂನ್ 30ರಂದು ಅಡ್ವಾನಿ ಮತ್ತು  ಜುಲೈ 1ರಂದು ಎಂಎಂ ಜೋಷಿ,  ಜುಲೈ 2ರಂದು ಕಲ್ಯಾಣ್ ಸಿಂಗ್, ಜೂನ್ 23ರಂದು ಮಹಾಂತ್ ಗೋಪಾಲ್ ದಾಸ್, ಜೂನ್ 22ರಂದು ಆರ್ ಎಂ ಶ್ರೀವಾತ್ಸವ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. 

ಇದೇ ವೇಳೆ ಸಾಧ್ವಿ ರಿತಂಬರ, ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ಅವರು ಕ್ರಮವಾಗಿ ಜೂನ್ 29 ಮತ್ತು 30ರಂದು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com