ಮಧ್ಯಪ್ರದೇಶದಿಂದ ಜ್ಯೋತಿರಾದಿತ್ಯ, ದಿಗ್ವಿಜಯ್‍ ಮತ್ತು ಸೋಲಂಕಿ ರಾಜ್ಯಸಭೆಗೆ ಆಯ್ಕೆ!

ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ(ಭಾರತೀಯ ಜನತಾ ಪಕ್ಷ), ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‍ ಸಿಂಗ್(ಕಾಂಗ್ರೆಸ್) ಮತ್ತು ಸುಮೇರ್ ಸಿಂಗ್ ಸೋಲಂಕಿ(ಬಿಜೆಪಿ) ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ-ದಿಗ್ವಿಜಯ್ ಸಿಂಗ್
ಜ್ಯೋತಿರಾದಿತ್ಯ ಸಿಂಧಿಯಾ-ದಿಗ್ವಿಜಯ್ ಸಿಂಗ್

ಭೋಪಾಲ್: ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಭಾರತೀಯ ಜನತಾ ಪಕ್ಷ), ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‍ ಸಿಂಗ್(ಕಾಂಗ್ರೆಸ್) ಮತ್ತು ಸುಮೇರ್ ಸಿಂಗ್ ಸೋಲಂಕಿ (ಬಿಜೆಪಿ) ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಆದರೆ, ಕಣದಲ್ಲಿದ್ದ ಫೂಲ್ ಸಿಂಗ್ ಬರೈಯಾ (ಕಾಂಗ್ರೆಸ್‍) ಪರಾಭವಗೊಂಡಿದ್ದಾರೆ. ಮತಗಳ ಎಣಿಕೆ ಶುಕ್ರವಾರ ಸಂಜೆ ತಡವಾಗಿ ಮುಕ್ತಾಯವಾಯಿತು. 

ಎಲ್ಲಾ 206 ಶಾಸಕರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ವಿಧಾನಸಭೆಯಲ್ಲಿ ಬಿಜೆಪಿಯ 107, ಕಾಂಗ್ರೆಸ್ ನ 92, ಬಹುಜನ ಸಮಾಜ ಪಕ್ಷದ ಇಬ್ಬರು, ಸಮಾಜವಾದಿ ಪಕ್ಷದ ಒಬ್ಬರು ಹಾಗೂ ನಾಲ್ವರು ಪಕ್ಷೇತರ ಶಾಸಕರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com