ನೆಹರು ದೂಷಿಸುತ್ತಿರುವವರು ಆತ್ಮಾವಲೋಕನ ಮಾಡಿಕೊಂಡರೆ, 20 ಯೋಧರ ತ್ಯಾಗಕ್ಕೆ ಅರ್ಥ ಬರುತ್ತದೆ: ಪ್ರಧಾನಿ ಮೋದಿ ಗೆ ಶಿವಸೇನೆ ಟಾಂಗ್

ಜವಾಹರ್ ಲಾಲ್ ನೆಹರೂ ಅವರನ್ನು ದೂಷಿಸುತ್ತಿರುವವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೆ, 20 ಭಾರತೀಯ ಯೋಧರ ತ್ಯಾಗ ಅರ್ಥವಾಗುತ್ತೆದ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಶಿವಸೇನೆ ಶುಕ್ರವಾರ ತೀವ್ರವಾಗಿ ಕಿಡಿಕಾರಿದೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಮುಂಬೈ: ಜವಾಹರ್ ಲಾಲ್ ನೆಹರೂ ಅವರನ್ನು ದೂಷಿಸುತ್ತಿರುವವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೆ, 20 ಭಾರತೀಯ ಯೋಧರ ತ್ಯಾಗ ಅರ್ಥವಾಗುತ್ತೆದ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಶಿವಸೇನೆ ಶುಕ್ರವಾರ ತೀವ್ರವಾಗಿ ಕಿಡಿಕಾರಿದೆ. 

ತನ್ನ ಮುಖಪುಟ ಸಾಮ್ನಾದಲ್ಲಿ ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ಯೋಧರ ಸಂಘರ್ಷ ಕುರಿತು ಬರೆದುಕೊಂಡಿರುವ ಶಿವಸೇನೆ, ಮೋದಿ ವಿರುದ್ಧ ಕಿಡಿಕಾರಿದೆ. 

ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಭಾರತೀಯ ಯೋಧರನ್ನು ಸುತ್ತುವರೆದಿದ್ದು, ಕಬ್ಬಿಣದ ರಾಡ್ ಗಳಿಂದ ಭೀಕರವಾಗಿ ದಾಳಿ ನಡೆಸಿದ್ದಾರೆ. ಯೋಧರನ್ನು ಅಪಹರಣ ಮಾಡಿದ್ದಾರೆ. ಚೀನಾ ಯೋಧರು ದಾಳಿ ನಡೆಸುವ ಕುರಿತು ಭಾರತೀಯ ಸೇನೆ ಗಮನಹರಿಸಿರಲಿಲ್ಲ. ಏಕಾಏಕಿ ದಾಳಿ ನಡೆಸಿದ್ದಾರೆ. ಈ ಹಿಂದೆ ಪಾಕಿಸ್ತಾನ ಕೂಡ ಭಾರತೀಯ ಯೋಧರ ಶಿರಚ್ಛೇದ ಮಾಡಿತ್ತು. ಆಗೆಲ್ಲಾ ನಾವು ಕಿರುಚಾಡುತ್ತಿದ್ದೆವು. ಈ ವೇಳೆ ಹೇಳಿಕೆ ನೀಡಿದ್ದ ಅಧಿಕಾರಿಗಳು ಒಂದು ತಲೆಗೆ ಹತ್ತು ತಲೆಗಳನ್ನು ತರುತ್ತೇವೆಂದು ಹೇಳಿದ್ದರು. 

ಇದೀಗ ಚೀನಿ ಮಂಗಗಳು ನಮ್ಮ 20 ಯೋಧರನ್ನು ಕ್ರೂರವಾಗಿ ಹತ್ಯೆ ಮಾಡಿದೆ. 150ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಮೋದಿಯವರು ಅವಸರದಲ್ಲಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಹಿಂದೆ ಹೇಳಿಕೆ ನೀಡಿದ್ದ ಮೋದಿಯವರು, ಭಾರತ ಎಂದಿಗೂ ಸಮಗ್ರತೆಯ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಯಾರಾದರೂ ನಮ್ಮನ್ನು ಪ್ರಚೋದಿಸಲು ಯತ್ನಿಸಿದರೆ ಸೂಕ್ತ ಉತ್ತರ ನೀಡುತ್ತೇವೆಂದು ಹೇಳಿದ್ದರು. ಭಾರತ ಸ್ವಾಭಿಮಾನವನ್ನು ಹೊಂದಿದ್ದು, ಪ್ರತಿ ಇಂಚು ಭೂಮಿಯನ್ನು ರಕ್ಷಣೆ ಮಾಡುತ್ತದೆ. ಪ್ರಚೋದಿಸಿದ್ದೇ ಆದರೆ, ತಕ್ಕ ಉತ್ತರ ನೀಡುತ್ತೇವೆ. ಇದೀಗ 20 ಯೋಧರ ಹತ್ಯೆ ಪ್ರಚೋದನೆಯಲ್ಲವೇ? ಎಂದು ಪ್ರಶ್ನಿಸಿದೆ. 

ಪ್ರಚೋದನೆ ನೀಡುವವರಿಗೆ ತಕ್ಕ ಉತ್ತರ ನೀಡುತ್ತವೆಂದು ಹೇಳಿದ್ದ ಮೋದಿಯವರು ಇದೀಗ, ಆ ಕುರಿತು ಮಾತನಾಡುವ ಬದಲಾಗಿ ಯೋಧರ ತ್ಯಾಗ ವ್ಯರ್ಥವಾಗಲು ಎಂದಿದ್ದಾರೆ. ಚೀನಾ ನಡೆಸಿರುವ ದಾಳಿ ದೇಶದ ಸ್ವಾಭಿಮಾನ ಮತ್ತು ಸಮಗ್ರತೆಯ ಮೇಲಿನ ಅತೀದೊಡ್ಡ ದಾಳಿಯಾಗಿದೆ. ಪಾಕಿಸ್ತಾನಕ್ಕಷ್ಟೇ ನಾವು ಬೆದರಿಕೆ ಹಾಕಬಹುದು. ಚೀನಾದೊಂದಿಗೆ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದರ ಕುರಿತು ದೇಶದಲ್ಲಿರುವ ಭ್ರಮೆಯನ್ನು ಹೇಗೆ ಹೊರತರುತ್ತೀರಿ?... ನಮ್ಮ ಯೋಧರು ಇಂದಿಗೂ 1962ರ ಸನ್ನಿವೇಶವನ್ನೇ ಎದುರಿಸುತ್ತಿದ್ದಾರೆ. ಈಗಲೂ ನಾವು 20 ಯೋಧರನ್ನು ಕಳೆದುಕೊಂಡಿದ್ದೇವೆ. ಇಂದು ನಮ್ಮ ಬಳಿ ಎಲ್ಲವೂ ಇದ್ದರೂ ಚೀನಾ ನಮ್ಮ ಸೈನಿಕರ ಮೇಲೆ ದಾಳಿ ನಡೆಸುತ್ತಿದೆ. ಪಂಡಿತ್ ನೆಹರು ಅವರನ್ನು ದೂಷಿಸುವವರು ಮೊದಲು ತಮ್ಮ ಆತ್ಮಾವಲೋಕನ ಮಾಡಿಕೊಂಡರೆ, 20 ಯೋಧರ ತ್ಯಾಗ ಅರ್ಥವಾಗುತ್ತದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com