ಚೀನಾಗೆ ಸೆಡ್ಡು: ಗಡಿಯಲ್ಲಿ ಘರ್ಜಿಸಿದ ಭಾರತೀಯ ಯುದ್ಧ ವಿಮಾನಗಳು!

ಗಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರ ಹತ್ಯೆ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಗಡಿಯಲ್ಲಿ ಭಾರತೀಯ ಯುದ್ಧ ವಿಮಾನಗಳು ಘರ್ಜಿಸಿವೆ.
ಭಾರತೀಯ ಯುದ್ಧ ವಿಮಾನಗಳು
ಭಾರತೀಯ ಯುದ್ಧ ವಿಮಾನಗಳು

ಲೇಹ್: ಗಾಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರ ಹತ್ಯೆ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಗಡಿಯಲ್ಲಿ ಭಾರತೀಯ ಯುದ್ಧ ವಿಮಾನಗಳು ಘರ್ಜಿಸಿವೆ. 

ಮಿರಾಜ್ 2000, ಸುಕೋಯ್ ಯುದ್ಧ ವಿಮಾನಗಳು, ಅಪಾಚೆ ಮತ್ತು ಚಿನೂಕ್ ಹೆಲಿಕಾಪ್ಟರ್ ಗಳು ಹಾರಾಟ ನಡೆಸಿವೆ. ಈ ಮೂಲಕ ಚೀನಾದ ಮೇಲೆ ಹದ್ದಿನ ಕಣ್ಣೀಡಲಾಗಿದೆ. 

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಶ್ರೀನಗರ, ಅಂದಪೂರ್, ಅಂಬಾಲ, ಹಲ್ವಾರ, ಬರೇಲಿ ವಾಯು ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಚೀನಾ ದಾಳಿ ನಡೆಸಿದರೆ ತಕ್ಕ ತಿರುಗೇಟು ನೀಡಲು ಚೀನಾ ಗಡಿಯುದ್ದಕ್ಕೂ ಯೋಧರನ್ನು ಜಮಾವಣೆ ಮಾಡಲಾಗಿದೆ.

ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್ ಕೆಎಸ್ ಬಧೌರಿಯಾ ಲೇಹ್ ವಾಯುನೆಲೆಗೆ ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com