ಚೈನೀಸ್ ಫುಡ್ ಮಾಡುವ ರೆಸ್ಟೋರೆಂಟ್, ಹೋಟೆಲ್ ಗಳನ್ನು ಬಂದ್ ಮಾಡಿ: ಕೇಂದ್ರ ಸಚಿವ ಅಠಾವಳೆ ಆಗ್ರಹ

ಲಡಾಖ್ ಗಡಿಯಲ್ಲಿನ ಸಂಘರ್ಷದ ಬಳಿಕ ಚೀನಾ ವಿರುದ್ಧ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ರಾಷ್ಟ್ರವ್ಯಾಪಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗ ಜೋರಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಡಾಖ್ ಗಡಿಯಲ್ಲಿನ ಸಂಘರ್ಷದ ಬಳಿಕ ಚೀನಾ ವಿರುದ್ಧ ದೇಶದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ರಾಷ್ಟ್ರವ್ಯಾಪಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗ ಜೋರಾಗಿದೆ. 

ಚೈನೀಸ್ ಫುಡ್ ಮಾರಾಟ ಮಾಡುವ ರೆಸ್ಟೋರೆಂಟ್, ಹೋಟೆಲ್ ಗಳನ್ನು ಬಂದ್ ಮಾಡಬೇಕೆಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಕ್ರೋಶ ಹೊರಹಾಕಿದ್ದಾರೆ. 

ಚೈನೀಸ್ ಫುಡ್ ತಯಾರಿಸುವ ರೆಸ್ಟೋರೆಂಟ್ ಗಳನ್ನು ಬಂದ್ ಮಾಡಬೇಕು. ರಾಜ್ಯ ಸರ್ಕಾರಗಳು ಈ ಬಗ್ಗೆ ಆದೇಶ ಹೊರಡಿಸಬೇಕು. ಚೈನೀಸ್ ಫುಡ್ ಸೇವನೆಯನ್ನು ಜನರು ನಿಲ್ಲಿಸಬೇಕೆಂದು ಹೇಳಿದ್ದಾರೆ. 

ಅಲ್ಲದೆ, ಚೀನಾದಿಂದ ಬರುವ ಎಲ್ಲಾ ವಸ್ತುಗಳು, ಬರಹಗಳನ್ನು ನಿಷೇಧಿಸಬೇಕು. ಭಾರತದಲ್ಲಿ ಚೀನಾ ಕಂಪನಿಗಳು ವ್ಯವಹಾರ ನಡೆಸಲು ಅವಕಾಶ ನೀಡಬಾರದು. ಅದೇ ರೀತಿಯ ವಸ್ತುಗಳನ್ನು ದೇಶದಲ್ಲಿ ತಯಾರಿಸುವ ಕಂಪನಿಗಳಿಗೆ ಪ್ರೋತ್ಸಾಹ ನೀಡಬೇಕು. ನಮ್ಮಿಂದ ನೀವು ಬುದ್ಧನನ್ನು ಕಸಿದುಕೊಂಡಿದ್ದಾರೆ. ನಮ್ಮೆ ನಿಮ್ಮೊಂದಿಗೆ ಯುದ್ಧ ಬೇಕಿಲ್ಲ. ಯುದ್ಧ ಎರಡೂ ರಾಷ್ಟ್ರಗಳಿಗೂ ಭಾರೀ ನಷ್ಟವನ್ನು ಎದುರು ಮಾಡಲಿದೆ. ಆರ್ಥಿಕವಾಗಿ ಅಷ್ಟೇ ಅಲ್ಲದೆ, ಹಲವಾರು ಜೀವಗಳು ನಾಶವಾಗುತ್ತಿವೆ. ನಾವು ಗಡಿ ದಾಟಿಲ್ಲ, ನಾವೇಕೆ ಗಡಿ ನಿಯಮ ಉಲ್ಲಂಘಿಸುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com