20 ಸಾವಿರ ಕೋಟಿ ಮೊತ್ತದ ಸೆಂಟ್ರಲ್ ವಿಸ್ತಾ ಯೋಜನೆಗೆ ತಡೆ ನೀಡಲು 'ಸುಪ್ರೀಂ' ನಕಾರ

ರಾಷ್ಟ್ರ ರಾಜಧಾನಿಯಲ್ಲಿ 20 ಸಾವಿರ ಕೋಟಿ ಮೊತ್ತದ ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ತಾ ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.  ಕೇಂದ್ರ ದಿಲ್ಲಿಯ ಲುಟಿಯನ್ಸ್‌ ಪ್ರದೇಶದಲ್ಲಿ ಹೊಸ ಸಂಸತ್‌ ಭವನ ಮತ್ತು ಇತರ ಸರಕಾರಿ ಕಚೇರಿಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ.
ಸೆಂಟ್ರಲ್ ವಿಸ್ತಾ ಯೋಜನೆ
ಸೆಂಟ್ರಲ್ ವಿಸ್ತಾ ಯೋಜನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 20 ಸಾವಿರ ಕೋಟಿ ಮೊತ್ತದ ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ತಾ ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.  ಕೇಂದ್ರ ದಿಲ್ಲಿಯ ಲುಟಿಯನ್ಸ್‌ ಪ್ರದೇಶದಲ್ಲಿ ಹೊಸ ಸಂಸತ್‌ ಭವನ ಮತ್ತು ಇತರ ಸರಕಾರಿ ಕಚೇರಿಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ  ಸೆಂಟ್ರಲ್ ವಿಸ್ತಾ ಯೋಜನೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಏಕ ಸದಸ್ಯ ಪೀಠ, ಕೇಂದ್ರಸರ್ಕಾರದಿಂದ ಸಮಗ್ರ ವಿವರ ಬಯಸಿದೆ. 

ಅರ್ಜಿದಾರ ರಾಜೀವ್ ಸೂರಿ ಅರ್ಜಿಯಲ್ಲಿ ತಿದ್ದುಪಡಿ ಮಾಡಬೇಕೆಂಬ ಮನವಿಗೆ ಅವಕಾಶ ನೀಡಿದ ಉನ್ನತ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜುಲೈ 7 ರಂದು ನಡೆಸಲು ತೀರ್ಮಾನಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆ ವೇಳೆಯಲ್ಲಿ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಪರಿಸರ ಇತ್ಯರ್ಥ ಸಮಿತಿ ನಿನ್ನೆ ದಿನ ಕೆಲವೊಂದು ಆದೇಶ ನೀಡಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು. 

ಈ ವಿಷಯವನ್ನು ನಂತರ ತೆಗೆದುಕೊಳ್ಳಬಹುದು ಆದರೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಬೇಕು  ಎಂದು ಅರ್ಜಿದಾರರ ವಕೀಲರು ಹೇಳಿದರು.  ಈ ವಿಚಾರದಲ್ಲಿ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಲು ಸಮಯವನ್ನು ಕೇಂದ್ರಸರ್ಕಾರದ ಪರವಾಗಿ ಹಾಜರಾದ  ತುಷಾರ್ ಮೆಹ್ತಾ ಕೇಳಿದರು. 

ಕಳೆದ ವಿಚಾರಣೆ ಸಂದರ್ಭದಲ್ಲಿಯೂ ಸೆಂಟ್ರಲ್ ವಿಸ್ತಾ ಯೋಜನೆಗೆ ತಡೆ ನೀಡಲು ನಿರಾಕರಿಸಿತ್ತು.ಈ ಯೋಜನೆಗೆ ಸಂಬಂಧಿಸಿದಂತೆ ಬಳಸಲಾಗುತ್ತಿರುವ ಭೂಮಿ ಬದಲಾವಣೆ ಸಂಬಂಧ ಕೇಂದ್ರಸರ್ಕಾರದ ಅಧಿಸೂಚನೆಯನ್ನು ವಿರೋಧಿಸಿ ಸೂರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. 

ಇಂಡಿಯಾ ಗೇಟ್‌ ಮತ್ತು ರಾಷ್ಟ್ರಪತಿ ಭವನದ ನಡುವೆ ಸೆಂಟ್ರಲ್‌ ವಿಸ್ತಾ ಯೋಜನೆ ಜಾರಿಗೊಳಿಸಲಾಗುತ್ತಿದ್ದು 2021ರ ನವೆಂಬರ್‌ಗೆ ಪೂರ್ಣಗೊಳ್ಳಲಿದೆ. 2022ರ ಮಾರ್ಚ್‌ 22ಕ್ಕೆ ಮೊದಲು ಹೊಸ ಸಂಸತ್‌ ಭವನ ನಿರ್ಮಾಣವಾಗಲಿದ್ದು, 2024 ಮಾರ್ಚ್‌ಗೆ ಎಲ್ಲಾ ಸಚಿವಾಲಯಗಳೂ ಒಂದೇ ಕಡೆ ಕಾರ್ಯ ನಿರ್ವಹಿಸುವ ಕಾರ್ಯಾಲಯದ ನಿರ್ಮಾಣ ಪೂರ್ಣಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com