ಮಾರಕ ಕೊರೋನಾ ವೈರಸ್ ಗೆ 'ಫ್ಯಾಬಿಫ್ಲೂ' ರಾಮಬಾಣ?: ಭಾರತದಲ್ಲಿ  ಗ್ಲೇನ್ ಮಾರ್ಕ್ ಸಂಸ್ಥೆಯಿಂದ ತಯಾರಿಕೆ!

ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತ ಮೂಲದ ಗ್ಲೇನ್ ಮಾರ್ಕ್ ಸಂಸ್ಥೆಯ ಔಷಧಿ ರಾಮಬಾಣವಾಗಲಿದೆಯೇ? ಇಂತಹುದೊಂದು ಪ್ರಶ್ನೆ ಇದೀಗ ಕಾಡತೊಡಗಿದೆ.
ಫ್ಯಾಬಿ ಫ್ಲೂ (ಸಂಗ್ರಹ ಚಿತ್ರ)
ಫ್ಯಾಬಿ ಫ್ಲೂ (ಸಂಗ್ರಹ ಚಿತ್ರ)

ನವದೆಹಲಿ: ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತ ಮೂಲದ ಗ್ಲೇನ್ ಮಾರ್ಕ್ ಸಂಸ್ಥೆಯ ಔಷಧಿ ರಾಮಬಾಣವಾಗಲಿದೆಯೇ? ಇಂತಹುದೊಂದು ಪ್ರಶ್ನೆ ಇದೀಗ ಕಾಡತೊಡಗಿದೆ.

ಹೌದು..ಜಾಗತಿಕ ಮಹಾಮಾರಿ ಕೊವಿಡ್19 ಗೆ ಲಸಿಕೆ ಕಂಡು ಹಿಡಿಯಲು ಅನೇಕ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ಭಾರತದಲ್ಲಿ ತಯಾರಾಗುವ ಹೈಡ್ರೋಕ್ಸಿಕ್ಲೋರಿಕ್ವಿನ್ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಹೇಳಲಾಗಿತ್ತಾದರೂ, ಬಳಿಕ ಇದು ಯೋಗ್ಯವಲ್ಲ ಎಂದು ಹೇಳಲಾಗಿತ್ತು. ಇದೀಗ ಫಾವಿವಿರವಿರ್ (favipiravir) ಲಸಿಕೆ ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಹತ್ವದ ಸಕಾರಾತ್ಮಕ ಫಲಿತಾಂಶ ನೀಡಿದೆ ಎನ್ನಲಾಗಿದೆ.

ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ ದಾಟುತ್ತಿದ್ದಂತೆ ಅಲ್ಲಿ ಕೊವಿಡ್ 19 ಸೋಂಕಿತರ ಚಿಕಿತ್ಸೆಗೆ favipiravir ಡ್ರಗ್ ಬಳಸಲು ಅನುಮತಿ ನೀಡಲಾಯಿತು. ಭಾರತದಲ್ಲಿ 12, 573ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಇದೀಗ ದೇಶದಲ್ಲೂ favipiravir ಡ್ರಗ್ ಗ್ಲೆನ್ ಮಾರ್ಕ್ ಸಂಸ್ಥೆಯಿಂದ FabiFlu ಹೆಸರಿನಲ್ಲಿ ದೊರೆಯಲಿದೆ. favipiravir ಹಾಗೂ umifenovir ಸಂಯೋಜಿಸಿ ಹೊಸ ಡ್ರಗ್ ತಯಾರಿಸಿ ಕೂಡಾ ಮಾರುಕಟ್ಟೆಗೆ ತರುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.  favipiravir ಡ್ರಗ್ ಬಳಕೆಗೆ ನಿಯಮ ಗ್ಲೆನ್ ಮಾರ್ಕ್ ಸಂಸ್ಥೆ ಲಸಿಕೆ/ಮಾತ್ರೆ ಬಳಕೆ ಮಾಡುವ ಮೊದಲು ಸೋಂಕಿತ ವ್ಯಕ್ತಿಯಿಂದ ಲಿಖಿತ ಒಪ್ಪಿಗೆ ಪಡೆದುಕೊಂಡಿರಬೇಕು.

ಈ ಲಸಿಕೆ ಬಳಕೆಗೆ ಭಾರತೀಯ ಡ್ರಗ್ ನಿಯಂತ್ರಕ(ಡಿಜಿಸಿಐ) ಅನುಮತಿ ನೀಡಿದ್ದು,  favipiravir 200mg ಉತ್ಪಾದನೆ, ಮಾರಾಟ ಮಾಡುವ ಲೈಸನ್ಸ್ ಗ್ಲೆನ್ ಮಾರ್ಕ್ ಕಂಪನಿಗೆ ನೀಡಲಾಗಿದೆ. ಮುಂಬೈ ಮೂಲದ ಕಂಪನಿಗೆ ಈ ಡ್ರಗ್ ಬಳಕೆ ಅನುಮತಿ ಸಿಕ್ಕಿದ್ದು, ಲಘು ಹಾಗೂ ಮಧ್ಯಮ ಪ್ರಮಾಣದ ಕೊವಿಡ್ 19 ಸೋಂಕಿತರಿಗೂ ಇದನ್ನು ಬಳಸಬಹುದಾಗಿದೆ. ಬಾಯಿ ಮೂಲಕ ಸೇವಿಸಬಹುದಾದ ಈ antiviral ಡ್ರಗ್ ಫ್ಯಾಬಿಫ್ಲೂ (FabiFlu) ವಿಶೇಷತೆಯಂದರೆ ಇಲ್ಲಿ ತನಕ ಈ ಡ್ರಗ್ ಬಳಸಿದವರಲ್ಲಿ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಇದೇ ಕಾರಣಕ್ಕೆ ವೈದ್ಯಲೋಕ ಈ ಔಷಧಿ ಕುರಿತು ಅಚ್ಚರಿಯಿಂದ ನೋಡುತ್ತಿದೆ. ಜಪಾನ್ ಮೂಲದ ಈ ಮಾತ್ರೆಯನ್ನು ಕೋವಿಡ್ 19 ರೋಗಿಗಳಿಗೆ ನೀಡಿ ಕ್ಲಿನಿಕಲ್ ಟ್ರಯಲ್ ನಡೆಸಿ ಕಾರ್ಯ ಕ್ಷಮತೆ ಪರೀಕ್ಷಿಸಲಾಗುತ್ತಿದ್ದು, ಜಪಾನ್ ನ ಫ್ಯೂಜಿಫಿಲಂ ಹೋಲ್ಡಿಂಗ್ಸ್ ಕಾರ್ಪ್ ಸಂಸ್ಥೆ ಅವಿಗಾನ್(avigan) ಹೆಸರಿನಲ್ಲಿ favipiravir ಹೊರ ತಂದಿದೆ. ಜುಲೈ ವೇಳೆಗೆ ಸಂಪೂರ್ಣವಾಗಿ ಕೊವಿಡ್ 19 ತೊಲಗಿಸುವ ಡ್ರಗ್ ಆಗಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ಲೇನ್ ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯ  ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗ್ಲೆನ್ ಸಲ್ಡಾನ್ಹಾ ಅವರು ಮಾತನಾಡಿದ್ದು, ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದು ನಮ್ಮ ಆರೋಗ್ಯ ವ್ಯವಸ್ಥೆಯ ಮೇಲೆ ಅತೀವ ಒತ್ತಡ ಹೇರಿದೆ. ನಮ್ಮ ಸಂಸ್ಥೆಯ ಫ್ಯಾಬಿ ಫ್ಲೂ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ನೆರವಾಗಲಿದೆ. ದೇಶಾದ್ಯಂತ ರೋಗಿಗಳಿಗೆ ಫ್ಯಾಬಿಫ್ಲೂ ತ್ವರಿತವಾಗಿ ನೀಡಲು ನಾವು ಪ್ರಯತ್ನಿಸುತ್ತಿದ್ದು, ನಮ್ಮ ಗ್ಲೆನ್‌ಮಾರ್ಕ್ ಸಂಸ್ಥೆ  ಸರ್ಕಾರ ಮತ್ತು ವೈದ್ಯಕೀಯ ಸಮುದಾಯದೊಂದಿಗೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. 

ಸಂಸ್ಥೆ ಹೇಳಿಕೊಂಡಿರುವಂತೆ 103ರೂಗಳಿಗೆ 1 ಫ್ಯಾಬಿಫ್ಲೂ ಮಾತ್ರೆ ಲಭ್ಯವಾಗಲಿದ್ದು, ದಿನವೊಂದಕ್ಕೆ 1800 ಎಂಜಿ ಮಾತ್ರೆ ಸೇವಿಸಬೇಕು. ಅಥವಾ ಪ್ರತಿದಿನ 800 ಎಂಜಿಯ 2 ಮಾತ್ರೆಗಳನ್ನು ಪ್ರತೀ ನಿತ್ಯ ಸತತ 14 ದಿನಗಳ ಕಾಲ ಸೇವಿಸಬೇಕು. ಅಂತೆಯೇ ಈ ಫ್ಯಾಬಿ ಫ್ಲೂ ಮಾತ್ರೆಯನ್ನು ಶ್ವಾಸಕೋಶದ ತೊಂದರೆ, ಸಕ್ಕರೆ ಖಾಯಿಲೆ ಇರುವ ಸೋಂಕಿತರೂ ಕೂಡ ತೆಗೆದುಕೊಳ್ಳಬಹುದು. ಆದರೆ ಗರ್ಭಿಣಿ, ಬಾಣಂತಿ, ಕರುಳುಬೇನೆಯುಳ್ಳವರು, ಯೂರಿಕ್ ಆಮ್ಲ ಅಸಮತೋಲನವುಳ್ಳವರು. ಹೀಗೆ ಮುಂತಾದ ದೇಹ ಪರಿಸ್ಥಿತಿಯುಳ್ಳವರಿಗೆ ನೀಡುವಂತಿಲ್ಲ  ಈ ಮಾತ್ರೆ ದೇಹದಲ್ಲಿನ ವೈರಾಣು ಪ್ರಮಾಣವನ್ನು ತಗ್ಗಿಸಲಿದ್ದು, ಕೇವಲ 4 ದಿನದಲ್ಲೇ ಇದರ ಪರಿಣಾಮ ಗೋಚರಿಸಲಿದೆ. ಮೊದಲ ದಿನ 3600 mg, ಎರಡನೇ ದಿನ 1600 mg ಈ ರೀತಿ ಇಳಿಕೆ ಕ್ರಮದಲ್ಲೇ ನೀಡಬೇಕು. ಪ್ರಸ್ತುತ ಸಂಶೋಧನೆಯಲ್ಲಿ ಈ ಮಾತ್ರೆ ಶೇ.88ರಷ್ಟು ಮಧ್ಯಮ ಪ್ರಮಾಣದ ಲಕ್ಷಣಗಳಿರುವ ಸೋಂಕಿತರ ಮೇಲೆ ಸಕಾರಾತ್ಮಕವಾಗಿ ಕೆಲಸ ಮಾಡಿದೆ ಎಂದು ಸಂಸ್ಥೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com