ಭಾರತದ ಗಡಿ ಪ್ರವೇಶಿಸಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಚೀನಾಗೆ ಕ್ಲೀನ್ ಚಿಟ್ ನೀಡಿದ್ದಾರೆಯೇ: ಚಿದಂಬರಂ ಪ್ರಶ್ನೆ

ಚೀನಾ ಯೋಧರು ಭಾರತದ ಗಡಿ ಪ್ರವೇಶಿಸಿಲ್ಲ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾ ರಾಷ್ಟ್ರಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಶನಿವಾರ ಪ್ರಶ್ನಿಸಿದ್ದಾರೆ. 
ಚಿದಂಬರಂ
ಚಿದಂಬರಂ

ನವದೆಹಲಿ: ಚೀನಾ ಯೋಧರು ಭಾರತದ ಗಡಿ ಪ್ರವೇಶಿಸಿಲ್ಲ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೀನಾ ರಾಷ್ಟ್ರಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಶನಿವಾರ ಪ್ರಶ್ನಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಲಡಾಖ್ ಗಡಿ ಸಂಘರ್ಷ ಕುರಿತು ಕೇಂದ್ರ ಸರ್ಕಾರಕ್ಕೆ 5 ಪ್ರಶ್ನೆಗಳನ್ನು ಕೇಳಿದ್ದಾರೆ. 

ಭಾರತದ ಗಡಿ ಪ್ರದೇಶಕ್ಕೆ ವಿದೇಶಿ ಸೇನೆ ಪ್ರವೇಶಿಸಿಲ್ಲ ಎಂಬುದೇ ಸತ್ಯವಾದರೆ, ಮೇ.5 ಮತ್ತು 6ರಂದು ಭಾರತ-ಚೀನಾ ಗಡಿಯಲ್ಲಿ ಏನು ನಡೆಯಿತು? ಜೂನ್.16 ಮತ್ತು 17ರಂದು ಸೈನಿಕರ ನಡುವೆ ಸಂಘರ್ಷ ಆಗಿದ್ದು ಏಕೆ? 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದೇಕೆ? 

ಚೀನಾ ಸೈನ್ಯ ಭಾರತದ ಭೂಭಾಗದೊಳಕ್ಕೆ ನುಸುಳಿಲ್ಲವೇ? ಹಾಗಿದ್ದರೆ ಜೂನ್.6ರಂದು ಎರಡೂ ರಾಷ್ಟ್ರಗಳ ಕಾರ್ಪ್ಸ್ ಕಮಾಂಡರ್ ಗಳು ಏನು ಚರ್ಚೆ ಮಾಡಿದರು? ಅವರೇನು ಹವಾಮಾನದ ಕುರಿತು ಚರ್ಚೆ ನಡೆಸಿದರಾ? 

ಚೀನಾ ರಾಷ್ಟ್ರದ ಸೇನೆ ಎಲ್ಎಸಿ ದಾಟಿ ಭಾರತೀಯ ಭೂಪ್ರದೇಶಕ್ಕೆ ಬಂದಿಲ್ಲವೇ? ಹಾಗಿದ್ದರೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಯಥಾಸ್ಥಿತಿ ಪುನಃಸ್ಥಾಪನೆ ಮಂತ್ರ ಪಠಿಸಿದ್ದೇಕೆ? ಚೀನಾ ಭಾರತದ ಭೂಭಾಗಕ್ಕೆ ಬಂದಿಲ್ಲದಿದ್ದರೆ ಅಥವಾ ಗಡಿ ಒಪ್ಪಂದ ಉಲ್ಲಂಘನ ಮಾಡಿಲ್ಲದಿದ್ದರೆ ಎರಡೂ ದೇಶಗಳ ಸೈನ್ಯಗಳನ್ನು ತೆರವುಗೊಳಿಸುವ ಬಗ್ಗೆ ಇಷ್ಟೊಂದು ಚರ್ಚೆ ನಡೆಸಿದ್ದೇಕೆ? 

ಪ್ರಧಾನಿ ಮೋದಿ ಚೀನಾಗೆ ಕ್ಲೀನ್ ಚಿಟ್ ನೀಡಿದ್ದಾರೆಯೇ? ಕ್ಲೀನ್ ಚಿಟ್ ನೀಡುವುದಾದರೆ ಚೀನಾದೊಂದಿಗೆ ಮಾತುಕತೆ ನಡೆಸುವ ಅಗತ್ಯವೇನು? ಮೇಜರ್ ಜನರಲ್ ಗಳು ಮಾತುಕತೆ ನಡೆಸುತ್ತಿರುವುದು ಏಕೆ? ಅವರು ಯಾವುದರ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com