ಮತ್ತೊಮ್ಮೆ ವಿಫಲಗೊಂಡ ಪಾಕ್ ಸಂಚು: ಶಸ್ತ್ರಾಸ್ತ್ರ ಹೊತ್ತೊಯ್ಯುತ್ತಿದ್ದ ಡ್ರೋಣ್ ಹೊಡೆದುರುಳಿಸಿದ ಸೇನೆ

ಭಾರತದ ಮೇಲೆ ವಿಧ್ವಂಸಕ ಕೃತ್ಯವೆಸಲು ಸದಾಕಾಲ ತುದಿಗಾಲಲ್ಲಿ ನಿಂತಿರುವ ಪಾಕಿಸ್ತಾನ ಉಗ್ರ ಸಂಘಟನೆಗಳ ಮತ್ತೊಂದು ದಾಳಿ ಸಂಚನ್ನು ಭಾರತೀಯ ಸೇನೆ ವಿಫಲಗೊಳ್ಳುವಂತೆ ಮಾಡಿದೆ.
ಸೇನಾಪಡೆಗಳು ಹೊಡೆದುರುಳಿಸಿರುವ ಡ್ರೋಣ್
ಸೇನಾಪಡೆಗಳು ಹೊಡೆದುರುಳಿಸಿರುವ ಡ್ರೋಣ್

ನವದೆಹಲಿ: ಭಾರತದ ಮೇಲೆ ವಿಧ್ವಂಸಕ ಕೃತ್ಯವೆಸಲು ಸದಾಕಾಲ ತುದಿಗಾಲಲ್ಲಿ ನಿಂತಿರುವ ಪಾಕಿಸ್ತಾನ ಉಗ್ರ ಸಂಘಟನೆಗಳ ಮತ್ತೊಂದು ದಾಳಿ ಸಂಚನ್ನು ಭಾರತೀಯ ಸೇನೆ ವಿಫಲಗೊಳ್ಳುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಅಂತರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನದ ಡ್ರೋಣ್'ನ್ನು ಭಾರತೀಯ ಸೇನಾಪಡೆಗಳು ಹೊಡೆರುಳಿಸಿದೆ. 

ಕಥುವಾ ಜಿಲ್ಲೆಯ ಹೀರಾನಗರ್ ತಾಲೂಕಿನ ರಥುವಾ ಗ್ರಾಮದ ಬಳಿ ಶಸ್ತ್ರಾಸ್ತ್ರ ಹೊತ್ತೊಯ್ಯುತ್ತಿದ್ದ ಡ್ರೋಣ್'ನ್ನು ಸೇನಾಪಡೆಗಳು ಹೊಡೆದುರುಳಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಹೀರಾನಗರ್ ಸೆಕ್ಟರ್ ಬಳಿ ಪಾಕಿಸ್ತಾನದ ಡ್ರೋಣ್ ಹಾರಾಡುತ್ತಿರುವುದನ್ನು ಯೋಧರು ಗಮನಿಸಿದ್ದಾರೆ. ಕೂಡಲೇ ಗುಂಡು ಹಾರಿಸಿ ನೆಲಕ್ಕೆ ಉರುಳುವಂತೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com