ಕಣಿವೆಯಲ್ಲಿ ಭರ್ಜರಿ ಭೇಟಿ: ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರ ಹತ್ಯೆ- ಐಜಿ ವಿಜಯ್ ಕುಮಾರ್ 

ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ
ಐಜಿಪಿ ವಿಜಯ್ ಕುಮಾರ್
ಐಜಿಪಿ ವಿಜಯ್ ಕುಮಾರ್

ಶ್ರೀನಗರ: ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ನಾಲ್ಕು ತಿಂಗಳಲ್ಲಿ ಇದೇ ಪ್ರಥಮ ಬಾರಿಗೆ ಎಂಬಂತೆ  ಲಷ್ಕರ್ ಇ- ತೊಯ್ಬಾ, ಜೈಷ್ -ಇ- ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ , ಅನ್ಸಾರ್ ಘಾಜ್ವಾತ್ -ಉಲ್- ಹಿಂದ್ ಸಂಘಟನೆಯ ನಾಲ್ವರು ಮುಖ್ಯಸ್ಥರನ್ನು ಹತ್ಯೆ ಮಾಡಿರುವ ಭದ್ರತಾ ಪಡೆಗಳನ್ನು ಅಭಿನಂದಿಸುತ್ತೇನೆ. ನಾಯಕರ ಹತ್ಯೆಯಿಂದಾಗಿ ಉಗ್ರ ಸಂಘಟನೆಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಕಳೆದ ಎರಡು ದಿನಗಳಲ್ಲಿ ಎರಡು ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಕುಲ್ಗಾಮ್ ನಲ್ಲಿ ಶನಿವಾರ ನಡೆದ ಕಾರ್ಯಾಚರಣೆ ವೇಳೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಮತ್ತಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಮೃತರಲ್ಲಿ ಒಬ್ಬ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದ್ದು ಜಿಇಎಂ ಉಗ್ರನಾಗಿದ್ದು ಶೂಟರ್, ಸ್ಫೂಟಕದಲ್ಲಿ ಪರಿಣತಿ ಹೊಂದಿದ್ದ. ಸ್ಥಳದಿಂದ ಎಕೆ-47, ಪಿಸ್ತೂಲ್ ಮತ್ತಿತರ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಕಥುವಾ ಜಿಲ್ಲೆಯ ಹೀರಾನಗರ್ ತಾಲೂಕಿನ ರಥುವಾ ಗ್ರಾಮದ ಬಳಿ ಶಸ್ತ್ರಾಸ್ತ್ರ ಹೊತ್ತೊಯ್ಯುತ್ತಿದ್ದ ಡ್ರೋಣ್'ನ್ನು ಸೇನಾಪಡೆಗಳು ಹೊಡೆದುರುಳಿಸಿ, ಎಂ 4 ರೈಫಲ್ಸ್ ಸೇರಿದಂತೆ ಮತ್ತಿತರ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕ್ ಡ್ರೋಣ್ ಮೂಲಕ  ಉಗ್ರ ಫಾರ್ಕನ್ ಗೆ ಎಂ4 ರೈಫಲ್ಸ್  ಕಳುಹಿಸಲಾಗುತಿತ್ತೇನೋ ಎಂಬ ಮಾಹಿತಿ ಕಲೆ ಹಾಕಲಾಗಿದೆ ಎಂದು ತಿಳಿಸಿದರು. 

ಶ್ರೀನಗರದ ಜಾಬಿದಾಲ್ ಬಳಿ ನಡೆದ ಎನ್ ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್ ಕುಮಾರ್,  ಶರಣಾಗುವಂತೆ ಹೇಳಿದೇವು. ಆದರೆ, ಅದನ್ನು ಕೇಳದ ಉಗ್ರರು ಕೈ ಗ್ರೇನೆಡ್ ಗಳನ್ನು ಎಸೆದರು. ನಂತರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟರು. ಮೃತರ ಪೈಕಿ ಇಬ್ಬರ ಗುರುತನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com