ಹೊಸದಾಗಿ ನೇಮಕಗೊಂಡ ಐಎಎಫ್ ಅಧಿಕಾರಿಗಳು ಎಲ್ಎಸಿಗೆ ಕಳಿಸಿದ ವಾಯುಪಡೆ!

ಈಶಾನ್ಯ ಲಡಾಖ್ ನ ಗಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಕ್ಯಾತೆ ಬೆನ್ನಲ್ಲೇ ಐಎಎಫ್ ಗೆ ಹೊಸದಾಗಿ ನೇಮಕಗೊಂಡ ಅಧಿಕಾರಿಗಳನ್ನು ಗಡಿ ಪ್ರದೇಶದ ಎಲ್ಎಸಿಗಳಿಗೆ ಕಳಿಸಲಾಗಿದೆ. 
ಹೊಸದಾಗಿ ನೇಮಕಗೊಂಡ ಐಎಎಫ್ ಅಧಿಕಾರಿಗಳು ಎಲ್ಎಸಿಗೆ ಕಳಿಸಿದ ವಾಯುಪಡೆ!
ಹೊಸದಾಗಿ ನೇಮಕಗೊಂಡ ಐಎಎಫ್ ಅಧಿಕಾರಿಗಳು ಎಲ್ಎಸಿಗೆ ಕಳಿಸಿದ ವಾಯುಪಡೆ!

ನವದೆಹಲಿ: ಈಶಾನ್ಯ ಲಡಾಖ್ ನ ಗಲ್ವಾನ್ ಗಡಿ ಪ್ರದೇಶದಲ್ಲಿ ಚೀನಾ ಕ್ಯಾತೆ ಬೆನ್ನಲ್ಲೇ ಐಎಎಫ್ ಗೆ ಹೊಸದಾಗಿ ನೇಮಕಗೊಂಡ ಅಧಿಕಾರಿಗಳನ್ನು ಗಡಿ ಪ್ರದೇಶದ ಎಲ್ಎಸಿಗಳಿಗೆ ಕಳಿಸಲಾಗಿದೆ. ತರಬೇತಿ ಮುಕ್ತಾಯಗೊಳಿಸಿದ ಅಧಿಕಾರಿಗಳು, ಚೀನಾದ ಕ್ಯಾತೆಯ ಪರಿಣಾಮವಾಗಿ ಅಲರ್ಟ್ ನಲ್ಲಿರುವ ಭಾರತೀಯ ರಕ್ಷಣಾಪಡೆಗಳಿಗೆ ನೆರವಾಗುತ್ತಾರೆ ಎಂದು ಹಿರಿಯ ಐಎಎಫ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

123 ಫ್ಲೈಟ್ ಕೆಡೆಟ್ಸ್, 61 ಅಧಿಕಾರಿಗಳು ಫ್ಲೈಯಿಂಗ್ ಬ್ರಾಂಚ್ ನ್ನು ಸೇರ್ಪಡೆಯಾಗಿದ್ದು, 62 ಮಂದಿಯನ್ನು ಗ್ರೌಂಡ್ ಡ್ಯುಟಿಗೆ ನಿಯೋಜನೆ ಮಾಡಲಾಗಿದೆ. ಈ ಪೈಕಿ 19 ಮಹಿಳಾ ಅಧಿಕಾರಿಗಳೂ ಇದ್ದಾರೆ. " ಈ ಅಧಿಕಾರಿಗಳು ಫಿಟ್ನೆಸ್ ಹಾಗೂ ಸ್ಥೈರ್ಯದ ಉತ್ತುಂಗದಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರಿಯಾಗುತ್ತಾರೆ ಎನ್ನುತ್ತಾರೆ ಹಿರಿಯ ಅಧಿಕಾರಿ. ಸಾಮಾನ್ಯವಾಗಿ, ಪರೇಡ್ ಮುಕ್ತಾಯಗೊಳಿಸಿದ ನಂತರ ಅಧಿಕಾರಿಗಳು ಐಎಎಫ್ ಸೇರುವುದಕ್ಕೂ ಮುನ್ನ ಮನೆಗೆ ಭೇಟಿ ನೀಡಿ ವಾಪಸ್ಸಾಗಲು 21 ದಿನಗಳ ಕಾಲ ರಜೆ ನೀಡಲಾಗುತ್ತದೆ.

ವಾಯುಪಡೆಯ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಆರ್​.ಕೆ.ಎಸ್​ ಭಡೌರಿಯಾ ಹೈದರಾಬಾದ್ ನ ದುಂಡಿಗಲ್ ನಲ್ಲಿ ನಡೆದ ಏರ್ ಫೋರ್ಸ್ ಅಕಾಡೆಮಿಯಲ್ಲಿ ಕಂಬೈನ್ಡ್ ಗ್ರಾಜ್ಯುಯೇಷನ್ ಪರೇಡ್ (ಸಿಜಿಪಿ) ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚೀನಾ ಜೊತೆಗೆ ನಡೆದ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿ ಪರೇಡ್ ನ್ನುದ್ದೇಶಿಸಿ ಮಾತನಾಡಿರುವ ಅವರು, ಲಡಾಖ್ ನ ಎಲ್ಎಸಿಯಲ್ಲಿ ನಡೆದ ಬೆಳವಣಿಗೆ ತಕ್ಷಣದಲ್ಲಿ ರಕ್ಷಣಾ ಪಡೆಗಳು ನಿರ್ವಹಿಸಬೇಕಾಗಿ ಬರುವುದರ ಸಣ್ಣ ಉದಾಹರಣೆಯಷ್ಟೇ ಎಂದು ಹೇಳಿದ್ದಾರೆ. ಭಾರತೀಯ ಸೇನೆ ಸಹ ಹೊಸದಾಗಿ ಸೇರ್ಪಡೆಯಾಗಿವ 333 ಯೋಧರನ್ನು ಜೂ.13 ರಂದು ಡೆಹ್ರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ನೇರವಾಗಿ ಪೋಸ್ಟಿಂಗ್ ಗೆ ಕಳುಹಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com