ಪಾಕ್ ನಿಂದ ವಾಪಸ್ಸಾದ ಭಾರತದ ಐವರು ಹೈ ಕಮೀಷನ್ ಅಧಿಕಾರಿಗಳು

 ಪಾಕಿಸ್ತಾನ ಭದ್ರತಾ ಏಜೆನ್ಸಿಗಳಿಂದ ಅಪಹರಿಸಿ, ಕಿರುಕುಳ ಅನುಭವಿಸಿದ್ದ ಇಬ್ಬರು ಸೇರಿದಂತೆ ಐವರು ಭಾರತೀಯ ಹೈ ಕಮೀಷನ್ ಅಧಿಕಾರಿಗಳು ಸೋಮವಾರ ಅಠಾರಿ-ವಾಘಾ ಗಡಿಯ ಮೂಲಕ ಸ್ವದೇಶಕ್ಕೆ ವಾಪಸ್ಸಾದರು
ಪಾಕ್- ಭಾರತ ಗಡಿ ಚಿತ್ರ
ಪಾಕ್- ಭಾರತ ಗಡಿ ಚಿತ್ರ

ಅಮೃತಸರ: ಪಾಕಿಸ್ತಾನ ಭದ್ರತಾ ಏಜೆನ್ಸಿಗಳಿಂದ ಅಪಹರಿಸಿ, ಕಿರುಕುಳ ಅನುಭವಿಸಿದ್ದ ಇಬ್ಬರು ಸೇರಿದಂತೆ ಐವರು ಭಾರತೀಯ ಹೈ ಕಮೀಷನ್ ಅಧಿಕಾರಿಗಳು ಸೋಮವಾರ ಅಠಾರಿ-ವಾಘಾ ಗಡಿಯ ಮೂಲಕ ಸ್ವದೇಶಕ್ಕೆ ವಾಪಸ್ಸಾದರು.

ಇವರಲ್ಲಿ ಇಬ್ಬರನ್ನು ಜೂನ್ 15 ರಂದು  ಅಪಹರಿಸಿದ್ದ ಪಾಕಿಸ್ತಾನದ ಭದ್ರತಾ ಏಜೆನ್ಸಿಗಳು, ಅಕ್ರಮವಾಗಿ 10 ಗಂಟೆಗೂ ಹೆಚ್ಚು ಕಾಲ ಕಸ್ಟಡಿಯಲ್ಲಿಡುವ ಮೂಲಕ ಕಿರುಕುಳ ನೀಡಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈ ವಿಷಯದಲ್ಲಿ ತೀವ್ರ ಪ್ರತಿಭಟನೆ ದಾಖಲಿಸಲು ಪಾಕಿಸ್ತಾನದ ಹೈ ಕಮೀಷನರ್ ಸೈಯದ್ ಹೈದರ್ ಶಾ ಅವರಿಗೆ ಭಾರತ 'ಡಿ ಚಾರ್ಜ್' ನಡಿ ಸಮನ್ಸ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com