ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆ ಗಡಿಯಲ್ಲಿ ಪಾಕಿಸ್ತಾನ ಸೇನೆ ದಾಳಿ: ಭಾರತೀಯ ಯೋಧ ಹುತಾತ್ಮ

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಪಾಕಿಸ್ತಾನ ಯೋಧರು ಇಂದು ನಸುಕಿನ ಜಾವ ಗಡಿ ನಿಯಂತ್ರಣ ರೇಖೆಯ ಪೂಂಚ್ ಜಿಲ್ಲೆಯ ರಜೌರಿ ನೌಶೆರಾ ವಲಯದಲ್ಲಿ ಮತ್ತು ಕತೌ ಜಿಲ್ಲೆಯ ಐಬಿ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ದಾಳಿ ನಡೆಸಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಇಂದು ನಸುಕಿನ ಜಾವ 3.30ರ ಸುಮಾರಿಗೆ ಪಾಕಿಸ್ತಾನ ಸೇನೆ ಪೂಂಚ್ ಜಿಲ್ಲೆಯ ಕೃಷ್ಣನಗಾಟಿ ವಲಯದಲ್ಲಿ ಅಪ್ರಚೋದಿತ ಗುಂಡು ಮತ್ತು ಶಸ್ತ್ರಾಸ್ತ್ರ ದಾಳಿ ಆರಂಭಿಸಿತು, ನಂತರ ಮತ್ತೆ ರಜೌರಿ ಜಿಲ್ಲೆಯ ನೌಶೆರಾ ವಲಯದಲ್ಲಿ ಸಹ ಪಾಕಿಸ್ತಾನ ಸೇನೆ ಬೆಳಗ್ಗೆ 5.30 ರ ಸುಮಾರಿಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ತಿಳಿಸಿದರು.

ಗಡಿ ನಿಯಂತ್ರಣ ರೇಖೆಯ ಹತ್ತಿರ ನೌಶೆರಾ ವಲಯದ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದ ಸೇನಾ ಯೋಧ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರು.  ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮಧ್ಯೆಯೇ ಮೃತಪಟ್ಟಿದ್ದಾರೆ.

ಈ ತಿಂಗಳಲ್ಲಿ ಜಮ್ಮು-ಕಾಶ್ಮೀರದ ಪೂಂಚ್ ಮತ್ತು ರಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾ ಯೋಧರ ದಾಳಿಗೆ ಹುತಾತ್ಮರಾಗುತ್ತಿರುವ ನಾಲ್ಕನೇ ಸೇನಾ ಯೋಧ ಇವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com