ಕೋವಿಡ್-19 ಚಿಕಿತ್ಸೆ: ಭಾರತದ ರೋಗಿಗಳಿಗಾಗಿ ಸಿಪ್ಲಾದಿಂದ ಜನರಿಕ್ ರೆಮ್ಡಿಸಿವಿರ್ ಬಿಡುಗಡೆ

ಭಾರತದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಗಾಗಿ ರೆಮ್ಡಿಸಿರ್ ನ ಜನರಿಕ್ ಆವೃತ್ತಿಯನ್ನು ದೇಶಿಯ ಫಾರ್ಮಾ ಸಂಸ್ಥೆ ಸಿಪ್ಲಾ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 

ಅಮೆರಿಕದ ಫುಡ್-ಡ್ರಗ್ ಸೇಫ್ಟಿ ವಿಭಾಗ ಕೋವಿಡ್-19 ರ ಚಿಕಿತ್ಸೆಗಾಗಿ ರೆಮ್ಡಿಸಿವಿರ್ ನ್ನು ತುರ್ತು ಪರಿಸ್ಥಿತಿಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕೃತ ಘೋಷಣೆ ಮಾಡಿದೆ. ಯುಎಸ್ಎಫ್ ಡಿಎ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ರೆಮ್ಡಿಸಿವಿರ್ ನ್ನು ತುರ್ತಾಗಿ ಬಳಸಿಕೊಳ್ಳುವುದಕ್ಕೆ ಗಿಲ್ಯಾಡ್ ಸೈನ್ಸಸ್ ಗೆ ಎಮರ್ಜೆನ್ಸಿ ಯೂಸ್ ಆಥರೈಸೇಷನ್ (ಇಯುಎ) ನೀಡಿತ್ತು.
ರೆಮ್ಡಿಸಿವಿರ್ ಔಷಧ ಯುಎಸ್ ಎಫ್ ಡಿಎ ಅನುಮೋದಿತ, ಎಮರ್ಜೆನ್ಸಿ ಯೂಸ್ ಆಥರೈಸೇಷನ್ (ಇಯುಎ) ಔಷಧವಾಗಿದ್ದು, ಕೋವಿಡ್-19 ನ್ನು ಎದುರಿಸುತ್ತಿರುವವರಿಗೆ ನೀಡಬಹುದಾಗಿದೆ. 

ಮೇ ತಿಂಗಳಲ್ಲಿ ಗಿಲ್ಯಾಡ್ ಸೈನ್ಸಸ್ ಐಎನ್ ಸಿ ರೆಮ್ಡಿಸಿವಿರ್ ನ ಜನರಿಕ್ ಆವೃತ್ತಿಯಾದ ಸಿಪ್ರೆಮಿಯನ್ನು ತಯಾರಿಸುವುದಕ್ಕೆ ಸ್ವಯಂ, ನಾನ್ ಎಕ್ಸ್ಲ್ಯೂಸಿವ್ ಪರವಾನಗಿಯನ್ನು ಸಿಪ್ಲಾಗೆ ನೀಡಿತ್ತು. ಈ ಬಳಿಕ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನಿಂದ ರೆಗ್ಯುಲೇಟರಿ ದೊರೆತಿದೆ ಎಂದು ಸಿಪ್ಲಾ ತಿಳಿಸಿತ್ತು. ಈಗ ಶೀಘ್ರವೇ ರೆಮ್ಡಿಸಿವಿರ್ ನ ಜನರಿಕ್ ಆವೃತ್ತಿ ಜನರಿಗೆ ಲಭ್ಯವಾಗುವಂತೆ ಮಾಡುತ್ತಿರುವುದಾಗಿ ಸಿಪ್ಲಾ ತಿಳಿಸಿದೆ. 
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com