'ಲಡಾಕ್ ಲಡಾಯಿ' ಎಂದು ಕೊನೆ? ಇಂದು ಮತ್ತೆ ಭಾರತ-ಚೀನಾ ಸೇನೆಯ ಕೋರ್ ಕಮಾಂಡರ್ ಮಟ್ಟದ ಮಾತುಕತೆ

ಭಾರತ- ಚೀನಾ ನಡುವೆ ಸೇನೆಯ ಕೋರ್ ಕಮಾಂಡರ್ ಮಟ್ಟದ ಮಾತುಕತೆಗಳು ಸೋಮವಾರ ಮತ್ತೆ ಆರಂಭವಾಗಿವೆ. ಮಾತುಕತೆ ಆರಂಭಿಸಬೇಕೆಂದು ಚೀನಾ ಕೋರಿಕೆಯ ಹಿನ್ನಲೆಯಲ್ಲಿ ಈ ಮಾತುಕತೆ ಆರಂಭಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ- ಚೀನಾ ನಡುವೆ ಸೇನೆಯ ಕೋರ್ ಕಮಾಂಡರ್ ಮಟ್ಟದ ಮಾತುಕತೆಗಳು ಸೋಮವಾರ ಮತ್ತೆ ಆರಂಭವಾಗಿವೆ. ಮಾತುಕತೆ ಆರಂಭಿಸಬೇಕೆಂದು ಚೀನಾ ಕೋರಿಕೆಯ ಹಿನ್ನಲೆಯಲ್ಲಿ ಈ ಮಾತುಕತೆ ಆರಂಭಗೊಂಡಿದೆ.

ಗಡಿಯಲ್ಲಿನ ಚೀನಾದ ಬದಿಯ ಮೊಲ್ಡೊವನ್ ಪ್ರದೇಶದಲ್ಲಿ ಮಾತುಕತೆ ನಡೆಯುತ್ತಿದೆ. ಭಾರತದ ಪರವಾಗಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾ ಪರವಾಗಿ ಮೇಜರ್ ಜನರಲ್ ಲಿಯು ಲಿನ್ ಮಾತುಕತೆ ನಡೆಸುತ್ತಿದ್ದಾರೆ. ಗಾಲ್ವಾನ್ ಘಟನೆಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಉದ್ವಿಗ್ನತೆ ಶಮನಗೊಳಿಸುವ ಉದ್ದೇಶ ಮಾತುಕತೆ ಹೊಂದಿದೆ.

ಲೇಹ್ ಮೂಲದ 14 ಕಾರ್ಪ್ಸ್ ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರು ಮತ್ತೊಂದು ಸುತ್ತಿನ ಮಾತುಕತೆಯನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಜೊತೆಗೆ ನಡೆಸುತ್ತಾರೆ ಎಂದು ಭಾರತೀಯ ಸೇನಾ ಮೂಲಗಳು ಖಚಿತಪಡಿಸಿವೆ.

ಕಳೆದ 15ರಂದು ಲಡಾಖ್ ಗಲ್ವಾನ್ ಕಣಿವೆಯಲ್ಲಿ ಪಡೆಗಳನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ, ಚೀನಾ ನಡೆಸಿದ ದಾಳಿಯಿಂದಾಗಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮಗೊಂಡಿದ್ದರು. ಭಾರತೀಯ ಯೋಧರು ನಡೆಸಿದ ಪ್ರತಿ ದಾಳಿಗೆ ಚೀನಾದ ಸೇನೆಯ ಯೋಧರು ಸಹ ಸಾಕಷ್ಟು ಸಂಖ್ಯೆಯಲ್ಲಿ ಮೃತಪಟ್ಟಿದ್ದು, ಆದರೆ, ಈ ಕುರಿತು ಚೀನಾ ಯಾವುದೇ ಹೇಳಿಕೆಯನ್ನುಈವರೆಗೂ ನೀಡಿಲ್ಲ. ಕಳೆದ ಶುಕ್ರವಾರ ಸರ್ವಪಕ್ಷ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಹೆಸರನ್ನು ನೇರವಾಗಿ ಉಲ್ಲೇಖಿಸಿದ್ದಾರೆ.

ಗಡಿಯಲ್ಲಿ ಚೀನಾ ನಡೆಸಿರುವ ದೌರ್ಜನ್ಯದ ಬಗ್ಗೆ ದೇಶಾದ್ಯಂತ ಜನರಲ್ಲಿ ಆಕ್ರೋಶವಿದೆ ಎಂದು ಅವರು ಹೇಳಿದ್ದರು. ಮತ್ತೊಂದೆಡೆ, ಗಡಿಯಲ್ಲಿ ಚೀನಾ ಪಡೆಗಳ ವರ್ತನೆಯನ್ನು ಸಮರ್ಥವಾಗಿ ಎದುರಿಸಲು ಮೂರು ಸೇನಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ತುರ್ತು ನಿಧಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಈ ಮಧ್ಯೆ, ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಕೂಡ ಲೇಹ್ ಗೆ ಇದೇ ವಾರ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಕಳೆದ ಜೂನ್ 6ರಂದು ಇಂತಹ ಸಭೆ ನಡೆದಿತ್ತು. ಅದರಲ್ಲಿ ಒಮ್ಮತಕ್ಕೆ ಬರುವುದೆಂದು ಮಾತುಕತೆಯಾಗುತ್ತಿದ್ದಂತೆ ಕಳೆದ 15ರಂದು ಘರ್ಷಣೆಯಾಗಿ ಯೋಧರ ಸಾವು ನೋವು ಸಂಭವಿಸಿದೆ. ಈಗ ನಿಗದಿಯಾಗಿರುವ ಸಭೆಯಲ್ಲಿ ಏನು ಮಾತುಕತೆಯಾಗುತ್ತದೆ, ಅದರಿಂದ ಸಿಗುವ ಫಲಿತಾಂಶವೇನು, ಪ್ರಯೋಜನವಾಗಲಿದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಪೂರ್ವ ಲಡಾಕ್ ನಲ್ಲಿ ಕಳೆದ ಜೂನ್ 5 ಮತ್ತು 6ರಂದು ಚೀನಾ ಸೇನಾ ಪಡೆ ಫಿಂಗರ್ 4 ಪ್ರದೇಶದಲ್ಲಿ ಭಾರತೀಯ ಸೇನೆ ಜೊತೆ ಸಂಘರ್ಷ ಆರಂಭಿಸಿತು. ಈ ಘಟನೆ ಬಳಿಕ ಚೀನಾ ಸೇನೆ ಗಲ್ವಾನ್ ಕಣಿವೆಯ ಎರಡು ಪ್ರದೇಶಗಳಿಗೆ ನುಗ್ಗಿ ಗೊಗ್ರಾ ಪೋಸ್ಟ್ ಮತ್ತು ಫಿಂಗರ್ 4 ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com