ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಾಲ್ವಾನ್ ಸಂಘರ್ಷ: 500 ಕೋಟಿ ರೂ. ವರೆಗೆ ತುರ್ತು ಶಸ್ತ್ರಾಸ್ತ್ರ ಖರೀದಿಗೆ ಸೇನೆಗೆ ಕೇಂದ್ರ ಸರ್ಕಾರ ಅಸ್ತು

ಚೀನಾ ಸೈನಿಕರೊಂದಿಗಿನ ಸಂಘರ್ಷದ ಬೆನ್ನಲ್ಲೇ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸಡ್ಡು ಹೊಡೆಯಲು ಮುಂದಾಗಿರುವ ಭಾರತ ಇದೀಗ ಸೇನೆಗೆ 500 ಕೋಟಿ ರೂಗಳ ವರೆಗೂ ತುರ್ತು ಶಸ್ತ್ರಾಸ್ತ್ರ ಖರೀದಿಗೆ  ಅಸ್ತು ಎಂದಿದೆ.

ನವದೆಹಲಿ: ಚೀನಾ ಸೈನಿಕರೊಂದಿಗಿನ ಸಂಘರ್ಷದ ಬೆನ್ನಲ್ಲೇ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸಡ್ಡು ಹೊಡೆಯಲು ಮುಂದಾಗಿರುವ ಭಾರತ ಇದೀಗ ಸೇನೆಗೆ 500 ಕೋಟಿ ರೂಗಳ ವರೆಗೂ ತುರ್ತು ಶಸ್ತ್ರಾಸ್ತ್ರ ಖರೀದಿಗೆ  ಅಸ್ತು ಎಂದಿದೆ.

ಹೌದು.. ಗಡಿಯಲ್ಲಿ ಈಗಾಗಲೇ ಚೀನೀ ಸೈನಿಕರ ಹುಟ್ಟಡಗಿಸಿರುವ ಭಾರತೀಯ ಯೋಧರ ಆತ್ಮಸ್ಥೈರ್ಯದ ಜೊತೆಗೆ ಸೇನೆಗೆ ಕೇಂದ್ರ ಸರ್ಕಾರದ ಆರ್ಥಿಕ ಬಲವೂ ಜೊತೆಯಾಗಿದ್ದು, ಸೇನೆಗೆ ಶಸ್ತ್ರಾಸ್ತ್ರ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.  ಅಷ್ಟೇ ಅಲ್ಲದೆ ಚೀನಿಯರನ್ನ ಸದೆಬಡಿಯಲು ಬೇಕಾದ ಯುದ್ಧೋಪಕರಣಗಳ ಪೂರೈಕೆಗೆ ಮುಂದಾಗಿದೆ. ತುರ್ತಾಗಿ ಮೂರು ಸೇನೆಗಳಿಗೆ 500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಅತ್ಯಾಧುನಿಕ ಆಯುಧಗಳನ್ನ ಖರೀದಿಸಲು ಅನುಮತಿ ನೀಡಿದೆ. ಇದರಿಂದ ಭಾರತೀಯ ಸೈನಿಕರಲ್ಲಿ ರಣೋತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಅನುಮತಿ ಸಿಕ್ಕ ಬೆನ್ನಲ್ಲೇ ಎಲ್ಲಾ ಸೇನಾ ವಿಭಾಗಗಳು ತುರ್ತು ಸಂದರ್ಭದಲ್ಲಿ ಬೇಕಾಗುವ ವಸ್ತುಗಳನ್ನ ಶೀಘ್ರವಾಗಿ ಖರೀದಿಸಲು ಸಿದ್ಧತೆ ನಡೆಸುತ್ತಿವೆ ಎನ್ನಲಾಗಿದೆ.

ಈಗಾಗಲೇ ಸೇನೆಗೆ ನೀಡಲಾದ ಬಜೆಟ್ ನಲ್ಲಿ ಭಾರತೀಯ ವಾಯುಸೇನೆ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳು ಸೇರಿದಂತೆ   ಹಲವು ಬಗೆಯ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ. ಅಮೆರಿಕ ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳು (precision-guided Munitions)ಗಳನ್ನು ಖರೀದಿ ಮಾಡಿದೆ. ಇದಲ್ಲದೆ ನೌಕಾಪಡೆಗೆ ಬೇಕಾದ ಹಲವು ಬಗೆಯ ಯುದ್ಝನೌಕೆಗಳು ಮುಂಬೈ ಡಾಕ್ ಯಾರ್ಡ್ ನಲ್ಲಿ ಸಿದ್ಧಪಡಿಸಲಾಗುತ್ತಿದೆ. ಭವಿಷ್ಯದಲ್ಲಿ ಈ ನೌಕೆಗಳೇ ಭಾರತದ ಸೇನಾ ಸಾಮರ್ಥ್ಯವನ್ನು ದ್ವಿಗುಣ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಮತ್ತೆ ಭಾರತ-ಚೀನಾ ಸೇನಾಧಿಕಾರಿಗಳ ಮಾತುಕತೆ!
ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಾರತೀಯ ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ, ಸೇನಾಧಿಕಾರಿಗಳು ಚೀನಾ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ. ಈ ವಾರದಲ್ಲೇ ಮಾತುಕತೆಗೆ ಮುಹೂರ್ತ ನಿಗದಿಯಾಗಿದೆ. ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ದೇಹದ ಮೇಲೆ ಹರಿತವಾದ, ಚೂಪಾದ ಶಸ್ತ್ರಗಳಿಂದ ಇರಿದ ಗಾಯಗಳಾಗಿವೆ ಎಂದು ಕೆಲ ಸೇನಾ ವೈದ್ಯರು ಮಾಹಿತಿ ಕೊಟ್ಟಿದ್ದಾರೆ.  ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ಬಳಕೆಗೆ ಸೇನೆಗೆ ಅನುಮತಿ ನೀಡಿದೆ ಎನ್ನಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com