ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣ ಅತ್ಯಂತ ಕಡಿಮೆ: ವಿಶ್ವ ಆರೋಗ್ಯ ಸಂಸ್ಥೆ ವರದಿ

ದೇಶದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿರುವಂತೆ ಸಮಾಧಾನಕಾರ ಸಂಗತಿಯೊಂದು ಹೊರಬಿದ್ದಿದೆ.ಜನಸಾಂದ್ರತೆ ಹೆಚ್ಚಿದ್ದರೂ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಪ್ರಕರಣಗಳು ವಿಶ್ವಸಂಸ್ಥೆ ಕೊರೋನಾ ಪರಿಸ್ಥಿತಿ ಕುರಿತ ವರದಿಯಲ್ಲಿ ಕಂಡುಬಂದಿವೆ.

Published: 22nd June 2020 05:23 PM  |   Last Updated: 23rd June 2020 03:05 PM   |  A+A-


Covid-patient1

ಕೋವಿಡ್-19 ರೋಗಿಯ ಚಿತ್ರ

Posted By : Nagaraja AB
Source : PTI

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿರುವಂತೆ ಸಮಾಧಾನಕಾರ ಸಂಗತಿಯೊಂದು ಹೊರಬಿದ್ದಿದೆ. ಭಾರತದಲ್ಲಿ ಜನಸಾಂದ್ರತೆ ಹೆಚ್ಚಿದ್ದರೂ ಪ್ರತಿ ಲಕ್ಷ ಜನಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಪ್ರಕರಣಗಳು  ಇವೆ ಎಂಬುದಾಗಿ ವಿಶ್ವಸಂಸ್ಥೆ ಕೊರೋನಾ ಪರಿಸ್ಥಿತಿ ಕುರಿತ ವರದಿಯಲ್ಲಿ ಕಂಡುಬಂದಿವೆ.

ದೇಶದಲ್ಲಿ ಲಕ್ಷ ಜನಸಂಖ್ಯೆಯಲ್ಲಿ ಶೇ. 30.04 ರಷ್ಟು ಪ್ರಕರಣಗಳು ವರದಿಯಾಗಿದ್ದರೆ, ಜಾಗತಿಕ ಸರಾಸರಿ ಇದಕ್ಕೂ ಮೂರು ಪಟ್ಟು ಅಧಿಕ ಎಂಬಂತೆ 114.67 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್-19 ರೋಗಿಗಳಲ್ಲಿ ಚೇತರಿಕೆ ಪ್ರಮಾಣ ಶೇ.55.77 ರಷ್ಟಿದೆ ಎಂದು ಹೇಳಿದೆ.

ಸೋಮವಾರ ದೇಶದಲ್ಲಿ 14, 821 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆ ಆಗಿದೆ. ಹೊಸದಾಗಿ 445 ಜನರ ಸಾವಿನೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 13,699ಕ್ಕೆ ಏರಿಕೆಯಾಗಿದೆ.

ಭಾನುವಾರ ದೇಶದಲ್ಲಿ ಕೊರೋನಾ ಸೋಂಕಿತ ಸಂಖ್ಯೆ 4 ಲಕ್ಷ ಗಡಿಯನ್ನು ದಾಟಿದ್ದು, ಈವರೆಗೂ 2,37,195 ರೋಗಿಗಳು ಗುಣಮುಖರಾಗಿದ್ದಾರೆ. 1,74,387 ಪ್ರಕರಣಗಳು ಸಕ್ರಿಯವಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp