ಚೀನಾ ಒಳನುಸುಳುವಿಕೆ ಹಿಂದಿನ ನಿಜಾಂಶ ಬಹಿರಂಗಪಡಿಸಲು ಪ್ರಧಾನಿಗೆ ಕಾಂಗ್ರೆಸ್ ಒತ್ತಾಯ|
ಭಾರತದ ಭೂಪ್ರದೇಶಕ್ಕೆ ಚೀನಾ ಒಳನುಗ್ಗುವಿಕೆಯ ಹಿಂದಿನ ಸಂಗತಿಗಳನ್ನು ಪ್ರಧಾನಿ ಮೋದಿ ಮರೆಮಾಚಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಸತ್ಯವನ್ನು ಮರೆಮಾಚಿದ್ದಾದರೂ ಏಕೆ ಎಂದು ಜನರಿಗೆ ತಿಳಿಸುವಂತೆ ಒತ್ತಾಯಿಸಿದೆ.
Published: 22nd June 2020 02:29 AM | Last Updated: 22nd June 2020 02:29 AM | A+A A-

ಸಂಗ್ರಹ ಚಿತ್ರ
ನವದೆಹಲಿ: ಭಾರತದ ಭೂಪ್ರದೇಶಕ್ಕೆ ಚೀನಾ ಒಳನುಗ್ಗುವಿಕೆಯ ಹಿಂದಿನ ಸಂಗತಿಗಳನ್ನು ಪ್ರಧಾನಿ ಮೋದಿ ಮರೆಮಾಚಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಸತ್ಯವನ್ನು ಮರೆಮಾಚಿದ್ದಾದರೂ ಏಕೆ ಎಂದು ಜನರಿಗೆ ತಿಳಿಸುವಂತೆ ಒತ್ತಾಯಿಸಿದೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ‘ನಮ್ಮ ಭೂಪ್ರದೇಶಕ್ಕೆ ಯಾವುದೇ ಯಾರೊಬ್ಬರೂ ಒಳನುಗ್ಗಿಲ್ಲ. ನಮ್ಮ ಶಿಬಿರಗಳನ್ನು ಯಾರೂ ವಶಕ್ಕೆ ತೆಗೆದುಕೊಂಡಿಲ್ಲ.’ ಎಂದು ನಿನ್ನೆ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಇದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ವಿದೇಶಾಂಗ ಸಚಿವಾಲಯ ನೀಡಿದ ಹೇಳಿಕೆಗೆ ತದ್ವಿರುದ್ಧವಾಗಿದೆ. ಆದ್ದರಿಂದಲೇ ಇದು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ. ಇಡೀ ಗಾಲ್ವಾನ್ ಕಣಿವೆ ತಮ್ಮದೇ ಆಗಿರುವುದರಿಂದ ತಾವು ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿಲ್ಲ ಎಂದು ಚೀನಾ ಹೇಳಿದೆ ಎಂಬುದಾಗಿ ಸಿಬಲ್ ಗಮನಸೆಳೆದಿದ್ದಾರೆ.