ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೇನಾಪಡೆ ನಡುವಿನ ಸಂಘರ್ಷದ ವಿಡಿಯೋ ವೈರಲ್!

ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹಾಗೂ ಚೀನಾ ಯೋಧರ ನಡುವಿನ ಸಂಘರ್ಷ ನಡೆದ ಒಂದು ವಾರದ ಬಳಿಕ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗತೊಡಗಿದೆ.  
ಚೀನಾ-ಭಾರತ ಸೇನಾ ಪಡೆಗಳ ನಡುವಿನ ಸಂಘರ್ಷದ ವಿಡಿಯೋ ತುಣುಕು
ಚೀನಾ-ಭಾರತ ಸೇನಾ ಪಡೆಗಳ ನಡುವಿನ ಸಂಘರ್ಷದ ವಿಡಿಯೋ ತುಣುಕು

ಲಡಾಖ್: ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹಾಗೂ ಚೀನಾ ಯೋಧರ ನಡುವಿನ ಸಂಘರ್ಷ ನಡೆದ ಒಂದು ವಾರದ ಬಳಿಕ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗತೊಡಗಿದೆ.  

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿದೆ. ಭಾರತೀಯ ಹಾಗೂ ಚೀನಾದ ಸೇನಾ ಸಿಬ್ಬಂದಿಗಳು ಹಾಗೂ ಭಾರತೀಯ ಯೋಧರ ನಡುವೆ ವಾಗ್ವಾದ ನಡೆದು ಕೈ-ಕೈ ಮಿಲಾಯಿಸಿ ಬಡಿದಾಟ ನಡೆದಿರುವುದನ್ನು ಕಾಣಬಹುದಾಗಿದೆ.

ಭಾರತೀಯ ಯೋಧರು ಹಿಂದೆ ಹೋಗಿ, ಹೊಡೆದಾಡಬೇಡಿ ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿರುವ ಈ ವಿಡಿಯೋ ಅಧೃತತೆ ಬಗ್ಗೆ ಈ ವರೆಗೂ ಯಾವುದೇ ಸ್ಪಷ್ಟನೆ ದೊರೆತಿಲ್ಲ. ಇದು ಯಾವ ದಿನಾಂಕದ್ದು, ನಿರ್ದಿಷ್ಟವಾಗಿ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದಕ್ಕೂ ಮಾಹಿತಿ ಲಭ್ಯವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com