ಗಡಿ ಸಂಘರ್ಷವಾಯ್ತು ಈಗ ಚೀನಾದಿಂದ ಸೈಬರ್ ದಾಳಿ: 5 ದಿನಗಳಲ್ಲಿ 40 ಸಾವಿರ ಪ್ರಕರಣ

ಗಡಿ ಘರ್ಷಣೆಯ ಬೆನ್ನಲ್ಲೇ ಚೀನಾದಿಂದ ಸೈಬರ್ ದಾಳಿಯನ್ನು ಪ್ರಾರಂಭಿಸಿದ್ದು, ಬ್ಯಾಂಕಿಂಗ್, ಮಾಹಿತಿ ತಂತ್ರಜ್ನಾನ ಮೂಲಸೌಕರ್ಯ ಸೇರಿದಂತೆ ಭಾರತದ ಮಹತ್ವದ ಕ್ಷೇತ್ರಗಳ ಮೇಲೆ ಸೈಬರ್ ದಾಳಿಗೆ ಮುಂದಾಗಿದೆ. 
ಗಡಿ ಸಂಘರ್ಷವಾಯ್ತು ಈಗ ಚೀನಾದಿಂದ ಸೈಬರ್ ದಾಳಿ: 5 ದಿನಗಳಲ್ಲಿ 40 ಸಾವಿರ ಪ್ರಕರಣ
ಗಡಿ ಸಂಘರ್ಷವಾಯ್ತು ಈಗ ಚೀನಾದಿಂದ ಸೈಬರ್ ದಾಳಿ: 5 ದಿನಗಳಲ್ಲಿ 40 ಸಾವಿರ ಪ್ರಕರಣ

ಮುಂಬೈ: ಗಡಿಯಲ್ಲಿ ಘರ್ಷಣೆಯ ಬೆನ್ನಲ್ಲೇ ಚೀನಾದಿಂದ ಸೈಬರ್ ದಾಳಿಯನ್ನು ಪ್ರಾರಂಭಿಸಿದ್ದು, ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಸೇರಿದಂತೆ ಭಾರತದ ಮಹತ್ವದ ಕ್ಷೇತ್ರಗಳ ಮೇಲೆ ಸೈಬರ್ ದಾಳಿಗೆ ಮುಂದಾಗಿದೆ. 

ಚೀನಾದ ಹ್ಯಾಕರ್ ಗಳು 5 ದಿನಗಳಲ್ಲಿ ಬರೊಬ್ಬರಿ 40,000 ಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ನಡೆಸಲು ಯತ್ನಿಸಿದ್ದಾರೆ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಂಟರ್ ನೆಟ್ ಗ್ರಾಹಕರು ಫಿಶಿಂಗ್ ಯತ್ನಗಳೂ ಸೇರಿದಂತೆ ಈ ರೀತಿಯ ದಾಳಿಗಳ ಬಗ್ಗೆ ಎಚ್ಚರದಿಂದ ಇರಬೇಕು, ನಿಯಮಿತವಾಗಿ ಸೈಬರ್ ಸೆಕ್ಯುರಿಟಿ ಆಡಿಟ್ ಗಳನ್ನು ನಡೆಸಬೇಕೆಂದು ಮಹಾರಾಷ್ಟ್ರದ ಸೈಬರ್ ಸೆಲ್ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈಶಾನ್ಯ ಲಡಾಖ್ ನಲ್ಲಿ ಗಡಿ ಲಡಾಯಿ ಪ್ರಾರಂಭವಾದ ನಂತರ ಆನ್ ಲೈನ್ ದಾಳಿ ಪ್ರಾರಂಭಿಸಿದ್ದಾರೆ ಎಂದು ಸೈಬರ್ ವಿಭಾಗದ ವಿಶೇಷ ಐಜಿ ಯಶಸ್ವಿ ಯಾದವ್ ತಿಳಿಸಿದ್ದಾರೆ. ಮಹಾರಾಷ್ಟ್ರದ ಸೈಬರ್ ಈ ದಾಳಿಯ ಬಗ್ಗೆ ಮಾಹಿತಿ ಕಲೆಹಾಕಿದ್ದು, ಇದರ ಮೂಲ ಚೀನಾದಲ್ಲಿ ಪತ್ತೆಯಾಗಿದೆ. ಕಳೆದ 4-5 ದಿನಗಳಲ್ಲಿ 40,300 ಸಬರ್ ದಾಳಿಗಳ ಯತ್ನ ನಡೆದಿದ್ದು, ಸೇವೆಗಳನ್ನು ಕಡಿತಗೊಳಿಸುವುದಕ್ಕೆ ಇಂಟರ್ ನೆಟ್ ಪ್ರೋಟೋಕಾಲ್ ನ್ನು ಹೈಜಾಕ್ ಮಾಡಲು ಉದ್ದೇಶಿಸಲಾಗಿತ್ತು ಎಂದು ಯಾದವ್ ತಿಳಿಸಿದ್ದಾರೆ.

ಹ್ಯಾಕರ್ ಗಳ ಬಳಿಯಲ್ಲಿ ಕನಿಷ್ಟ 20 ಲಕ್ಷ ಭಾರತೀಯ ಇ-ಮೇಲ್ ಗಳ ಡಾಟಾ ಬೇಸ್ ನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ.
ಆನ್ ಲೈನ್ ಸೇವೆಗಳು, ಸರ್ಕಾರಿ ಏಜೆನ್ಸಿಗಳು, ಇಲಾಖೆಗಳು ಟ್ರೇಡ್ ಅಸೊಸಿಯೇಷನ್ ಗಳ ಹೆಸರಿನಲ್ಲಿ ಫಿಶಿಂಗ್ ನಡೆಸುವ ಸಾಧ್ಯತೆಗಳಿವೆ ಈ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಯಶಸ್ವಿ ಯಾದವ್ ಎಚ್ಚರಿಸಿದ್ದಾರೆ. ncov2019@gov.in ಐಡಿಯಲ್ಲಿ ಉಚಿತ ಕೋವಿಡ್-19 ಪರೀಕ್ಷೆ ನಡೆಸುವುದಾಗಿ ಇ- ಮೇಲ್ ಬಂದರೆ ಅದು ಹ್ಯಾಕರ್ ಗಳ ಕೃತ್ಯ ಎಂಬ ಎಚ್ಚರಿಕೆ ಇರಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com