ಅಮಿತ್ ಶಾ ಮತ್ತು ಕೇಜ್ರಿವಾಲ್
ಅಮಿತ್ ಶಾ ಮತ್ತು ಕೇಜ್ರಿವಾಲ್

10 ಸಾವಿರ ಬೆಡ್ ಗಳ ಕೊವಿಡ್ ಕೇರ್ ಸೆಂಟರ್ ನಿರ್ಧಾರ 3 ದಿನಗಳ ಹಿಂದೆಯೇ ತೆಗೆದುಕೊಳ್ಳಲಾಗಿದೆ: ಕೇಜ್ರಿವಾಲ್ ಗೆ ಅಮಿತ್ ಶಾ ಟಾಂಗ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿದ್ಧವಾಗುತ್ತಿರುವ ಬೃಹತ್ ಕೊವಿಡ್ ಕೇರ್ ಸೆಂಟರ್ ಸೌಲಭ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 10 ಸಾವಿರ ಬೆಡ್ ಗಳ ಕೊವಿಡ್ ಕೇರ್ ಸೆಂಟರ್ ನಿರ್ಧಾರ ಮೂರು ದಿನಗಳ ಹಿಂದೆಯೇ ತೆಗೆದುಕೊಳ್ಳಲಾಗಿದೆ ಮತ್ತು ಜೂನ್ 26 ರಿಂದ ಅದು ಆರಂಭವಾಗಲಿದೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿದ್ಧವಾಗುತ್ತಿರುವ ಬೃಹತ್ ಕೊವಿಡ್ ಕೇರ್ ಸೆಂಟರ್ ಸೌಲಭ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 10 ಸಾವಿರ ಬೆಡ್ ಗಳ ಕೊವಿಡ್ ಕೇರ್ ಸೆಂಟರ್ ನಿರ್ಧಾರ ಮೂರು ದಿನಗಳ ಹಿಂದೆಯೇ ತೆಗೆದುಕೊಳ್ಳಲಾಗಿದೆ ಮತ್ತು ಜೂನ್ 26 ರಿಂದ ಅದು ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅಮಿತ್ ಶಾ, ಆತ್ಮೀಯ ಕೇಜ್ರಿವಾಲ್ ಜಿ, ಇದನ್ನು 3 ದಿನಗಳ ಹಿಂದೆಯೇ ನಮ್ಮ ಸಭೆಯಲ್ಲಿ ನಿರ್ಧರಿಸಲಾಗಿದೆ ಮತ್ತು ದೆಹಲಿಯ ರಾಧಾ ಸ್ವಾಮಿ ಬಿಯಾಸ್‌ನಲ್ಲಿರುವ 10,000 ಹಾಸಿಗೆಗಳ ಕೊವಿಡ್ ಕೇರ್ ಸೆಂಟರ್ ಅನ್ನು ನಿರ್ವಹಿಸುವ ಕೆಲಸವನ್ನು ಗೃಹ ಸಚಿವಾಲಯ ಐಟಿಬಿಪಿಗೆ ವಹಿಸಿದೆ ಎಂದಿದ್ದಾರೆ.

ಕೊವಿಡ್ ಕೇರ್ ಸೆಂಟರ್ ಕಾಮಗಾರಿ ಪೂರ್ಣಗೊಳ್ಳುತ್ತಿದೆ ಮತ್ತು ಸೌಲಭ್ಯದ ಹೆಚ್ಚಿನ ಭಾಗವು ಜೂನ್ 26 ರೊಳಗೆ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ರೋಗಿಗಳಿಗಾಗಿ 250 ಐಸಿಯು ಬೆಡ್ ಹೊಂದಿರುವ 1,000 ಬೆಡ್ ಗಳ ಪೂರ್ಣ ಪ್ರಮಾಣದ ಆಸ್ಪತ್ರೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಾನು ದೆಹಲಿಯ ಜನರಿಗೆ ತಿಳಿಸಲು ಬಯಸುತ್ತೇನೆ. ಡಿಆರ್ ಡಿಒ ಮತ್ತು ಟಾಟಾ ಟ್ರಸ್ಟ್ ಈ ಸೌಲಭ್ಯವನ್ನು ಒದಗಿಸುತ್ತಿವೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಇದನ್ನು ನಿರ್ವಹಿಸುತ್ತಾರೆ. ಈ ಕೊವಿಡ್ ಕೇರ್ ಸೆಂಟರ್ ಮುಂದಿನ 10 ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

10,000 ಕೊವಿಡ್ ಕೇರ್ ಸೆಂಟರ್ ಅನ್ನು ಪರೀಕ್ಷಿಸಲು ಅಮಿತ್ ಶಾ ಅವರನ್ನು ಆಹ್ವಾನಿಸಿದ್ದ ಕೇಜ್ರಿವಾಲ್ ಅವರು, ಕೇರ್ ಸೆಂಟರ್ ನಲ್ಲಿ ಐಟಿಬಿಪಿ ಮತ್ತು ಸೇನೆಯ ವೈದ್ಯರು ಮತ್ತು ದಾದಿಯರನ್ನು ನಿಯೋಜಿಸುವಂತೆ ಮನವಿ ಮಾಡಿದ್ದರು. ಬಳಿಕ ಅಮಿತ್ ಶಾ ಅವರು ಈ ರೀತಿ ಸರಣಿ ಟ್ವೀಟ್ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com