ಪತಂಜಲಿ ಸಂಸ್ಥೆಯ ವರದಿ ಪರಿಶೀಲಿಸಿದ ಬಳಿಕವೇ ಔಷಧಿಗೆ ಅನುಮತಿ: ಆಯುಷ್ ಸಚಿವ ಶ್ರೀಪಾದ್ ನಾಯಕ್

ಪತಂಜಲಿ ಆಯುರ್ವೇದ ಸಂಸ್ಥೆ ಕೊರೋನಾ ಸೋಂಕಿಗೆ ಪರಿಚಯಿಸಿರುವ ಆಯುರ್ವೇದ ಔಷಧಿ ಕೊರೋನಿಲ್ ಮತ್ತು ಸ್ವಸಾರಿ ಬಗ್ಗೆ ವರದಿ ಬಂದ ನಂತರ ಆಯುಷ್ ಸಚಿವಾಲಯ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ ಎಂದು ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.
ಪತಂಜಲಿ ಸಂಸ್ಥೆಯ ಕೊರೋನಾ ಕಿಟ್
ಪತಂಜಲಿ ಸಂಸ್ಥೆಯ ಕೊರೋನಾ ಕಿಟ್

ನವದೆಹಲಿ: ಪತಂಜಲಿ ಆಯುರ್ವೇದ ಸಂಸ್ಥೆ ಕೊರೋನಾ ಸೋಂಕಿಗೆ ಪರಿಚಯಿಸಿರುವ ಆಯುರ್ವೇದ ಔಷಧಿ ಕೊರೋನಿಲ್ ಮತ್ತು ಸ್ವಸಾರಿ ಬಗ್ಗೆ ವರದಿ ಬಂದ ನಂತರ ಆಯುಷ್ ಸಚಿವಾಲಯ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತದೆ ಎಂದು ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ.

ಬಾಬಾ ರಾಮ್ ದೇವ್ ಕೊರೋನಾ ಚಿಕಿತ್ಸೆಗೆ ಹೊಸ ಆಯುರ್ವೇದ ಔಷಧಿ ಕಂಡುಹಿಡಿದದ್ದು ಖುಷಿಯ ಸಂಗತಿ. ಆದರೆ ನಿಯಮ ಪ್ರಕಾರ, ಅದು ಆಯುಷ್ ಸಚಿವಾಲಯಕ್ಕೆ ಮೊದಲು ಬರಬೇಕು. ನಮಗೆ ವರದಿ ಕಳುಹಿಸಿದ್ದಾರೆ ಎಂದು ಪತಂಜಲಿ ಸಂಸ್ಥೆ ಹೇಳಿದೆ. ನಾವು ಅದನ್ನು ಪರಿಶೀಲಿಸಿದ ನಂತರ ಮಾರುಕಟ್ಟೆಗೆ ತರಲು ಅನುಮತಿ ನೀಡುತ್ತೇವೆ ಎಂದು ಹೇಳಿದರು.

ಪತಂಜಲಿ ಆಯುರ್ವೇದ ಸಂಸ್ಥೆ ಕೋವಿಡ್-19 ಚಿಕಿತ್ಸೆಗೆ ಹೊಸ ಆಯುರ್ವೇದ ಔಷಧಿಯನ್ನು ಕಂಡುಹಿಡಿದಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ. ಆದರೆ ಅದನ್ನು ಕೇಂದ್ರ ಸಚಿವಾಲಯ ಪರಿಶೀಲಿಸಿ ಅನುಮತಿ ನೀಡಿದ ಬಳಿಕವಷ್ಟೆ ಪ್ರಚಾರ ಮಾಡಬಹುದು ಇಲ್ಲವೇ ಜಾಹೀರಾತುಗಳನ್ನು ನೀಡಬಹುದು, ಅಲ್ಲಿಯವರೆಗೆ ಪ್ರಚಾರ ಮಾಡುವ ಹಾಗಿಲ್ಲ ಎಂದು ಕೂಡ ಸಚಿವರು ಹೇಳಿದರು.

ಅಧ್ಯಯನ ಮಾಡಿ ವರದಿ ಸಿಗುವವರೆಗೆ ಪತಂಜಲಿ ಔಷಧದ ವಾಸ್ತವಾಂಶ ಮತ್ತು ವೈಜ್ಞಾನಿಕ ಹಿನ್ನೆಲೆ ಗೊತ್ತಿರುವುದಿಲ್ಲ. ಕೋವಿಡ್-19 ಬಗ್ಗೆ ಔಷಧಿ ಕಂಡುಹಿಡಿಯುವುದಿದ್ದರೆ, ಸಂಶೋಧನಾ ಅಧ್ಯಯನ ಮಾಡುವುದಿದ್ದರೆ ಆಯುಷ್ ಇಲಾಖೆಯ ಅನುಮತಿಯೂ ಅತ್ಯಗತ್ಯ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com