ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ
ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ

ಕೋವಿಡ್ ವಿರುದ್ಧ ಹೋರಾಟ: ಕೇರಳ ಆರೋಗ್ಯ ಸಚಿವೆ ಶೈಲಾಜಾಗೆ ವಿಶ್ವಸಂಸ್ಥೆ ವಿಶೇಷ ಗೌರವ

ಮಾರಕ ಕೊರೋನಾವೈರಸ್ ಹರಡುವುದನ್ನು ಯಶಸ್ವಿಯಾಗಿ ನಿಯಂತ್ರಿಸಿ ಮಾದರಿಯಾದ ಕೇರಳ ರಾಜ್ಯ ಆರೋಗ್ಯ ಸಚಿವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆಯಾದ ಜೂನ್ 23ರಂದು ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರನ್ನು ವಿಶ್ವಸಂಸ್ಥೆ ವಿಶೇಷವಾಗಿ ಪುರಸ್ಕರಿಸಿದೆ.

ವಿಶ್ವಸಂಸ್ಥೆ: ಮಾರಕ ಕೊರೋನಾವೈರಸ್ ಹರಡುವುದನ್ನು ಯಶಸ್ವಿಯಾಗಿ ನಿಯಂತ್ರಿಸಿ ಮಾದರಿಯಾದ ಕೇರಳ ರಾಜ್ಯ ಆರೋಗ್ಯ ಸಚಿವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ. ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆಯಾದ ಜೂನ್ 23ರಂದು ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರನ್ನು ವಿಶ್ವಸಂಸ್ಥೆ ವಿಶೇಷವಾಗಿ ಪುರಸ್ಕರಿಸಿದೆ.

ವರ್ಚುವಲ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಮತ್ತು ಇತರಭಾಗವಹಿಸಿದ್ದರು. ಆ ವೇಳೆ ಕೊರೋನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕಾಗಿ ಶೈಲಾಜಾ ಅವರನ್ನು ಶ್ಲಾಘಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಶೈಲಜಾ "ಕೇರಳ ಈ ಹಿಂದೆ ಎದುರಿಸಿದ್ದ ನಿಪಾ ವೈರಸ್, ಎರಡು ಭೀಕರ ಪ್ರವಾಹದ ಸ್ಥಿತಿಯು ಇಂದು ಕೋವಿಡ್ ವಿಚಾರದಲ್ಲಿ ರಾಜ್ಯ  ಆರೋಗ್ಯ ಕ್ಷೇತ್ರವು ನಿರ್ಣಾಯಕ ಪಾತ್ರ ವಹಿಸಲು ಸಹಾಯ ಮಾಡಿದೆ. ಚೀನಾದ ವುಹಾನ್ ನಲ್ಲಿ ಕೊರೋನಾ ಪ್ರಕರಣ ವರದಿಯಾಗುತ್ತಿದ್ದಂತೆಯೇ ರಳ ಡಬ್ಲ್ಯುಎಚ್‌ಒನ ಜಾಡು ಹಿಡಿಯಿತು ಮತ್ತು ಪ್ರತಿಆಪರೇಟಿಂಗ್ ಪ್ರೋಟೋಕಾಲ್‌ಗಳು ಮತ್ತು ಅಂತರರಾಷ್ಟ್ರೀಯ ರೂಪುರೇಷೆಗಳನ್ನು ಫಾಲೋ ಮಾಡಿಅಲು ಪ್ರಾರಂಭಿಸಿತು. ಇದರಿಂದಾಗಿ ಮಾರಕ ಕೊರೋನಾ ಸಂಪರ್ಕ ಹರಡುವುದನ್ನು  ಶೇಕಡಾ 12.5 ಕ್ಕಿಂತ ಕಡಿಮೆ ಮಾಡಲು ಹಾಗೂ ಮರಣ ಪ್ರಮಾಣವನ್ನು ಶೇ.0.6ಕ್ಕೆ ಕುಗ್ಗಿಸಲು ಸಾಧ್ಯವಾಯಿತು." ಎಂದಿದ್ದಾರೆ.

ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ರಾಜ್ಯವು ಅಳವಡಿಸಿಕೊಂಡ ಮೂರು ತಂತ್ರಗಳನ್ನು ಶೈಲಾಜಾ ವಿವರಿಸಿದರು, “ಟ್ರೇಸ್, ಕ್ಯಾರೆಂಟೈನ್, ಟೆಸ್ಟ್, ಐಸೊಲೇಟ್ ಅಂಡ್ ಟ್ರೀಟ್”, “ಬ್ರೇಕ್ ದಿ ಚೈನ್” ಮತ್ತು “ರಿವರ್ಸ್ ಕ್ಯಾರೆಂಟೈನ್,” ಎಂಬ ತಂತ್ರವನ್ನು ಅವರು ಅಳವಡಿಸಿಕೊಂಡಿದ್ದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕೊರೊನಾ ನಿಯಂತ್ರಣಕ್ಕೆ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ವಿಶ್ವಸಂಸ್ಥೆ ಗೌರವ ಸಲ್ಲಿಸಿದೆ. ಭಾರತದಿಂದ ಕೇರಳ ಆರೋಗ್ಯ ಸಚಿವರಿಗೆ ಮಾತ್ರವೇ ಆಹ್ವಾನ ಲಭಿಸಿತ್ತು. ಉಳಿದಂತೆ ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜನಿ ಮೊಹಮ್ಮದ್ ಬಂಡೆ, ಇಥಿಯೋಪಿಯಾದ ಅಧ್ಯಕ್ಷ ಸಾಹ್ಲೆ ವರ್ಕ್ ಸೂಡ್, ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಡೆನೊಮಮ್ ಗೆಬ್ರಿಯೇಶಿಯಸ್, ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಲಿಯು ಶೆನ್ಮಿನ್, ಕೊರಿಯಾದ ಆಂತರಿಕ ಮತ್ತು ಭದ್ರತಾ ಸಚಿವ ಚಿನ್ ಯಂಗ್ ಮೊದಲಾದವರು ಭಾಗವಹಿಸಿದ್ದರು.
 

Related Stories

No stories found.

Advertisement

X
Kannada Prabha
www.kannadaprabha.com