ಎಲ್ ಎಸಿಯಲ್ಲಿ ಸಹೋದ್ಯೋಗಿಗಳ ಪ್ರಾಣ ಉಳಿಸಲು ಹೋಗಿ ಮಹಾರಾಷ್ಟ್ರದ ಯೋಧ ಸಾವು

ಭಾರತ- ಚೀನಾ ಗಡಿ ಪ್ರದೇಶ ಗಲ್ವಾನ್ ಕಣಿವೆಯಲ್ಲಿ ನದಿಯಲ್ಲಿ ಬೀಳುತ್ತಿದ್ದ ಸಹೋದ್ಯೋಗಿಯ ಪ್ರಾಣ ಉಳಿಸಲು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾರತೀಯ ಸೇನೆಯ ಯೋಧರೊಬ್ಬರು ಇಂದು ಮೃತಪಟ್ಟಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಇಂದು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ- ಚೀನಾ ಗಡಿ ಪ್ರದೇಶ ಗಲ್ವಾನ್ ಕಣಿವೆಯಲ್ಲಿ ನದಿಯಲ್ಲಿ ಬೀಳುತ್ತಿದ್ದ ಸಹೋದ್ಯೋಗಿಯ ಪ್ರಾಣ ಉಳಿಸಲು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾರತೀಯ ಸೇನೆಯ ಯೋಧರೊಬ್ಬರು ಇಂದು ಮೃತಪಟ್ಟಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಇಂದು ತಿಳಿಸಿದ್ದಾರೆ.

ಮುಂಬೈನಿಂದ 200 ಕಿಲೋ ಮೀಟರ್ ದೂರದಲ್ಲಿರುವ ನಾಸಿಕ್ ಜಿಲ್ಲೆಯ ಮಾಲೇಗಾಂವ್ ನಿವಾಸಿ ಸಚಿನ್ ಮೋರೆ ಮೃತಪಟ್ಟ ಯೋಧ.ಭಾರತ- ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು  ನದಿಯಲ್ಲಿ ಬೀಳುತ್ತಿದ್ದ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಚಿನ್ ಮೋರೆ ಸಹೋದ್ಯೋಗಿಗಳು ಕೂಡಾ ಗಲ್ವಾನ್ ಕಣಿವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಚ್ಚಿನ ವಿವರಕ್ಕಾಗಿ ಕಾಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಚೀನಾಪಡೆಯೊಂದಿಗಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com