ಐಐಟಿ ಮುಂಬೈಯ ಮುಂದಿನ ಸೆಮಿಸ್ಟರ್ ಸಂಪೂರ್ಣ ಆನ್ ಲೈನ್: ವಿದ್ಯಾರ್ಥಿಗಳ ಸುರಕ್ಷತೆಯೇ ಮುಖ್ಯ ಎಂದ ಸಂಸ್ಥೆ

ಕೋವಿಡ್-19 ಹಿನ್ನೆಲೆಯಲ್ಲಿ ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂದಿನ ಸೆಮಿಸ್ಟರ್ ನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ನಡೆಸಲಿದೆ. ಕೋವಿಡ್ -19 ಸಮಯದಲ್ಲಿ ನಮಗೆ ವಿದ್ಯಾರ್ಥಿಗಳ ಸುರಕ್ಷತೆಯೇ ಮುಖ್ಯವಾಗಿದೆ ಎಂದು ಐಐಟಿ ಮುಂಬೈ ನಿರ್ದೇಶಕರು ತಿಳಿಸಿದ್ದಾರೆ.
ಐಐಟಿ ಬಾಂಬೆ
ಐಐಟಿ ಬಾಂಬೆ

ನವದೆಹಲಿ:ಕೋವಿಡ್-19 ಹಿನ್ನೆಲೆಯಲ್ಲಿ ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂದಿನ ಸೆಮಿಸ್ಟರ್ ನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ನಡೆಸಲಿದೆ. ಕೋವಿಡ್ -19 ಸಮಯದಲ್ಲಿ ನಮಗೆ ವಿದ್ಯಾರ್ಥಿಗಳ ಸುರಕ್ಷತೆಯೇ ಮುಖ್ಯವಾಗಿದೆ ಎಂದು ಐಐಟಿ ಮುಂಬೈ ನಿರ್ದೇಶಕರು ತಿಳಿಸಿದ್ದಾರೆ.

ಭಾರತದ ಐಐಟಿಗಳಲ್ಲಿ ಮುಂಬೈ ಐಐಟಿಯೇ ಮೊದಲ ಬಾರಿಗೆ ಈ ನಿರ್ಧಾರ ತೆಗೆದುಕೊಂಡಿದ್ದು ಶಿಕ್ಷಣ ಸಂಸ್ಥೆಯ 62 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊಸ ಶೈಕ್ಷಣಿಕ ಸೆಮಿಸ್ಟರ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಲ್ಲದೆ ಆನ್ ಲೈನ್ ನಲ್ಲಿ ನಡೆಯಲಿದೆ.

ದೇಶದ ಇನ್ನುಳಿದ ಐಐಟಿಗಳು ಸಹ ಇದೇ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ನಿನ್ನೆ ನಡೆದ ಸಭೆಯಲ್ಲಿ ಮುಂದಿನ ಶೈಕ್ಷಣಿಕ ಸೆಮಿಸ್ಟರ್ ನ್ನು ಸಂಪೂರ್ಣವಾಗಿ ಆನ್ ಲೈನ್ ವಿಧಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಐಐಟಿ ನಿರ್ದೇಶಕ ಸುಭಾಷಿಸ್ ಚೌಧರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com