ಜಮ್ಮು-ಕಾಶ್ಮೀರ: ಲಷ್ಕರ್ -ಇ-ತೊಯ್ಬಾ ಸಂಘಟನೆ ಅಡಗು ತಾಣ ಧ್ವಂಸ, 5 ಉಗ್ರರ ಸೆರೆ

ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿರುವ ಅಡಗು ತಾಣ ಧ್ವಂಸಗೊಳಿಸಿದ ಭದ್ರತಾ ಪಡೆ ಪೊಲೀಸರು ಸಂಘಟನೆಗೆ ಸೇರಿರುವ 5 ಮಂದಿ ಉಗ್ರರನ್ನು ಬಂಧಿಸುವಲ್ಲಿ ಗುರುವಾರ ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬುದ್ಗಾಮ್(ಜಮ್ಮು-ಕಾಶ್ಮೀರ): ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿರುವ ಅಡಗು ತಾಣ ಧ್ವಂಸಗೊಳಿಸಿದ ಭದ್ರತಾ ಪಡೆ ಪೊಲೀಸರು ಸಂಘಟನೆಗೆ ಸೇರಿರುವ 5 ಮಂದಿ ಉಗ್ರರನ್ನು ಬಂಧಿಸುವಲ್ಲಿ ಗುರುವಾರ ಯಶಸ್ವಿಯಾಗಿದ್ದಾರೆ.

ಬುದ್ಗಾಮ್ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ನ ಆರ್ಮಿ 2 ನ ಪೊಲೀಸರು ನಿಖರ ಮಾಹಿತಿ ಪಡೆದು ಶೋಧ ಕಾರ್ಯಾಚರಣೆ ವೇಳೆ ನರ್ಬಾಲ್ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಉಗ್ರರನ್ನು ಇಮ್ರಾನ್ ರಶೀದ್, ಇಫ್ಶಾನ್ ಅಹ್ಮದ್ ಘನಿ, ಒವೈಸ್ ಅಹ್ಮದ್, ಮೊಹ್ಸಿನ್ ಖದೀರ್ ಮತ್ತು ಅಬಿದ್ ರತೆರ್ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com