ಕೋವಿಡ್-19 ಔಷಧ: ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತಿತರ 5 ರಾಜ್ಯಗಳಿಗೆ ರವಾನೆ

ಹೈದರಾಬಾದ್ ಮೂಲದ ಔಷಧಿ ತಯಾರಕ ಕಂಪನಿ ಹೆಟೆರೊ, ಕಂಡುಹಿಡಿದು ಪ್ರಯೋಗಕ್ಕೆ ಒಳಪಟ್ಟಿರುವ ಕೋವಿಡ್-19 ನಿಯಂತ್ರಣ ಔಷಧ 'ರೆಮ್ಡಿ ಸಿವಿರ್' ಮಾರಾಟಕ್ಕೆ ಅನುಮೋದನೆ ದೊರೆತಿದ್ದು,ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20 ಸಾವಿರ ಬಾಟಲಿಗಳನ್ನು ಕಳುಹಿಸಲಾಗುತ್ತಿದೆ.
ಕೋವಿಡ್-19 ಔಷಧ
ಕೋವಿಡ್-19 ಔಷಧ

ನವದೆಹಲಿ: ಹೈದರಾಬಾದ್ ಮೂಲದ ಔಷಧಿ ತಯಾರಕ ಕಂಪನಿ ಹೆಟೆರೊ, ಕಂಡುಹಿಡಿದು ಪ್ರಯೋಗಕ್ಕೆ ಒಳಪಟ್ಟಿರುವ ಕೋವಿಡ್-19 ನಿಯಂತ್ರಣ ಔಷಧ 'ರೆಮ್ಡಿ ಸಿವಿರ್' ಮಾರಾಟಕ್ಕೆ ಅನುಮೋದನೆ ದೊರೆತಿದ್ದು,ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20 ಸಾವಿರ ಬಾಟಲಿಗಳನ್ನು ಕಳುಹಿಸಲಾಗುತ್ತಿದೆ.

ದೇಶದಲ್ಲಿ ಕೋವಿಪಾರ್ ಎಂಬ ಬ್ರಾಂಡ್ ಹೆಸರಿನಲ್ಲಿ ಇದರ ಮಾರಾಟ ಮಾಡಲಾಗುತ್ತಿದ್ದು, ಕೋವಿಡ್-19 ನಿಂದ ಪರಿಸ್ಥಿತಿ ತೀವ್ರಗೊಂಡಿರುವ ತಮಿಳು ನಾಡು,ಗುಜರಾತ್ ಮತ್ತಿತರ ರಾಜ್ಯಗಳು ಮೊದಲ ಹಂತದಲ್ಲಿ ಔಷಧವನ್ನು ಪಡೆಯಲಿವೆ. ತೆಲಂಗಾಣ ಕೂಡಾ ಮೊದಲ ಹಂತದಲ್ಲಿ ಔಷಧ ಪಡೆದುಕೊಳ್ಳಲಿದೆ. 100 ಗ್ರಾಮ್ ಬಾಟಲಿಗೆ 5 ಸಾವಿರದ 400 ರೂ. ಆಗಲಿದೆ ಎಂದು ಹೆಟೆರೂ ಹೇಳಿದೆ.

ವಯಸ್ಕರು ಮತ್ತು ಮಕ್ಕಳಿಗೆ ಮೊದಲ ದಿನ 200 ಮಿಲಿ ಗ್ರಾಮ್ ಔಷಧ ನೀಡಬೇಕು ನಂತರ ಪ್ರತಿದಿನ 100 ಗ್ರಾಮ್ ನಂತೆ 5 ದಿನಗಳವರೆಗೂ ನೀಡಬೇಕಾಗುತ್ತದೆ ಎಂದು ಶಿಫಾರಸ್ಸು ಮಾಡಲಾಗಿದೆ.

ಮುಂದಿನ ಹಂತದಲ್ಲಿ ಕೊಲ್ಕತ್ತಾ, ಇಂದೋರ್, ಭೂಪಾಲ್, ಲಖೌನ್, ಪಾಟ್ನಾ, ಭುವನೇಶ್ವರ್, ರಾಂಚಿ, ವಿಜಯವಾಡ, ಕೊಚ್ಚಿ, ತ್ರಿವೇಂದ್ರಮ್ ಮತ್ತು ಗೋವಾ ರಾಜ್ಯಗಳಿಗೆ ಔಷಧವನ್ನು ಪೂರೈಸಲಾಗುತ್ತಿದೆ.ಇನ್ನೂ ಮೂರು ನಾಲ್ಕು ವಾರಗಳಲ್ಲಿ 1 ಲಕ್ಷ ಬಾಟಲಿಗಳನ್ನು ತಯಾರಿಸುವ ಗುರಿಯನ್ನು ಕಂಪನಿ ಹೊಂದಿದೆ. 

ಪ್ರಸ್ತುತ ಹೈದ್ರಾಬಾದಿನಲ್ಲಿ ಈ ಔಷಧವನ್ನು ತಯಾರಿಸಲಾಗುತ್ತಿದ್ದು, ಆಸ್ಪತ್ರೆಗಳು ಮತ್ತು ಸರ್ಕಾರದ ಮೂಲಕ ಮಾತ್ರ ಔಷಧ ದೊರೆಯಲಿದೆ. ರಿಟೈಲ್ ನಲ್ಲಿ ದೊರೆಯುವುದಿಲ್ಲ .ಲೀವರ್ ಕಾಯಿಲೆ, ಕಿಡ್ನಿ ವೈಫಲ್ಯ,ಗರ್ಭಿಣಿಯರು ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಔಷಧ ನೀಡುವುದಿಲ್ಲ ಎಂದು ಎಂದು ಹೆಟೆರೊ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಂಶಿ ಕೃಷ್ಣ ಬಂಡಿ ಹೇಳಿದ್ದಾರೆ.

ಔಷಧ ತಯಾರಿಕ ಸಿಪ್ಲಾ ಕಂಪನಿ ಕೂಡಾ ಈ ಔಷಧವನ್ನು 5 ಸಾವಿರಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ಹೇಳಿದೆ.ಕೋವಿಡ್-19 ಪ್ರಕರಣಗಳು ಹೆಚ್ಚಾದಂತಹ ಸಂದರ್ಭದಲ್ಲಿ ಸಿಪ್ಲಾ ಮತ್ತು ಹೆಟೆರೊ ಕಂಡುಹಿಡಿರುವ ಔಷಧಗಳನ್ನು ಬಳಸಿಕೊಳ್ಳುವಂತೆ ರೆಗ್ಯುಲೇಟರ್ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

ಕೋವಿಡ್-19 ರೋಗಿಗಳಿಗೆ ಈ ಔಷಧ ಪ್ರಯೋಗದ ನಂತರ ಮೊದಲ ಬಾರಿಗೆ ಪ್ರಗತಿ ಕಂಡುಬಂದಿದೆ. ಅಮೆರಿಕಾ, ದಕ್ಷಿಣ ಕೊರಿಯಾದಲ್ಲಿ ತೀವ್ರ ಅನಾರೋಗ್ಯಪೀಡಿತ ರೋಗಿಗಳಿಗೆ ಬಳಸಲು ಅನುಮೋದನೆ ಪಡೆದುಕೊಂಡಿದೆ. ಜಪಾನ್ ನಿಂದಲೂ ಪೂರ್ಣ ಮಟ್ಟದ ಅನುಮೋದನೆ ದೊರೆತಿದೆ. ಅಮೆರಿಕಾದಲ್ಲಿ ಬೆಲೆಯನ್ನು ಇನ್ನು ನಿಗದಿಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com