45 ವರ್ಷಗಳ ಹಿಂದೆ ಒಂದು ಕುಟುಂಬದ ಅಧಿಕಾರ ದುರಾಸೆಯಿಂದ ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು: ಅಮಿತ್ ಶಾ

45 ವರ್ಷಗಳ ಹಿಂದೆ ಇದೇ ದಿನ ಒಂದು ಕುಟುಂಬದ ಅಧಿಕಾರದ ದುರಾಸೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು, ಭಾರತದ ಪಾಲಿಗೆ ಅದು ಕರಾಳದ ದಿನವಾಗಿತ್ತು ಎಂದು ಗೃಹ ಸಚಿವ ಅಮಿತಾ ಶಾ ಹೇಳಿದ್ದಾರೆ.
ಅಮಿತ್ ಶಾ(ಸಂಗ್ರಹ ಚಿತ್ರ)
ಅಮಿತ್ ಶಾ(ಸಂಗ್ರಹ ಚಿತ್ರ)

ನವದೆಹಲಿ: 45 ವರ್ಷಗಳ ಹಿಂದೆ ಇದೇ ದಿನ ಒಂದು ಕುಟುಂಬದ ಅಧಿಕಾರದ ದುರಾಸೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು, ಭಾರತದ ಪಾಲಿಗೆ ಅದು ಕರಾಳದ ದಿನವಾಗಿತ್ತು ಎಂದು ಗೃಹ ಸಚಿವ ಅಮಿತಾ ಶಾ ಹೇಳಿದ್ದಾರೆ.

1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ರಾತ್ರಿ ಕಳೆದು ಹಗಲಾಗುವುದರೊಳಗೆ ಇಡೀ ದೇಶದಲ್ಲಿ ಜೈಲಿನ ವಾತಾವರಣ ಕಂಡುಬಂತು. ಪತ್ರಿಕೆ, ನ್ಯಾಯಾಲಯಗಳು, ಮುಕ್ತವಾಗಿ ಮಾತನಾಡುವ, ಅಭಿಪ್ರಾಯ ಹೇಳುವ ಎಲ್ಲಾ ಸ್ವಾತಂತ್ರ್ಯಗಳನ್ನು, ಜನರ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲಾಯಿತು. ಸಮಾಜದ ಬಡವರು ಮತ್ತು ತುಳಿತಕ್ಕೊಳಗಾದವರ ಮೇಲೆ ದೌರ್ಜನ್ಯ ನಡೆಸಲಾಯಿತು ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಇಂದು ಸರ್ಕಾರದ ವಿರೋಧ ಪಕ್ಷವಾಗಿ ಕಾಂಗ್ರೆಸ್ ತನ್ನನ್ನು ತಾನು ಕೇಳಿಕೊಳ್ಳಬೇಕಿದೆ, 45 ವರ್ಷಗಳು ಕಳೆದ ನಂತರವೂ ಇನ್ನೂ ಆ ಪಕ್ಷದಲ್ಲಿ ತುರ್ತು ಪರಿಸ್ಥಿತಿಯ ಮನೋಭಾವ ಏಕೆ ಉಳಿದುಕೊಂಡಿದೆ, ಬೇರೆ ನಾಯಕರಿಗೆ ಮುಕ್ತವಾಗಿ ಮಾತನಾಡಲು ಆ ಪಕ್ಷದಲ್ಲಿ ಸಾಧ್ಯವಾಗುತ್ತಿಲ್ಲವೇಕೆ, ಕಾಂಗ್ರೆಸ್ ನಲ್ಲಿ ಉಳಿದ ನಾಯಕರು ಏಕೆ ಗೊಂದಲ, ತಳಮಳದಲ್ಲಿದ್ದಾರೆ, ಅಷ್ಟೇ ಅಲ್ಲದೆ ಜನಸಂಪರ್ಕದಿಂದ ದೂರ ಇರುವ ಪರಿಸ್ಥಿತಿ ಕಾಂಗ್ರೆಸ್ ನಲ್ಲಿ  ಏಕೆ ಹೆಚ್ಚಾಗುತ್ತಲೇ ಇದೆ ಎಂದು ಟ್ವೀಟ್ ಮೂಲಕ ಕೇಳಿದ್ದಾರೆ.

ಕಾಂಗ್ರೆಸ್ ನ ವಕ್ತಾರರೊಬ್ಬರನ್ನು ಇತ್ತೀಚೆಗೆ ವಜಾ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ ಅಮಿತ್ ಶಾ ಕಾಂಗ್ರೆಸ್ ನಲ್ಲಿ ನಾಯಕರು ಉಸಿರುಗಟ್ಟುವ ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೆಲ ಹಿರಿ-ಕಿರಿಯ ನಾಯಕರು ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ಯತ್ನಿಸಿದಾಗ ಅವರನ್ನು ಧ್ವನಿಯೆತ್ತದಂತೆ ಹತ್ತಿಕ್ಕಲಾಯಿತು. ಇತ್ತೀಚೆಗೆ ಪಕ್ಷದ ವಕ್ತಾರರೊಬ್ಬರನ್ನು ವಿನಾಕಾರಣವಾಗಿ ತೆಗೆದುಹಾಕಲಾಯಿತು. ಈ ದೇಶದ ಪ್ರಧಾನಿಯನ್ನು ಬೇಕಾದರೆ ಹೆದರಲಿಕ್ಕಿಲ್ಲ, ಆದರೆ ಪಕ್ಷದ ನಾಯಕನೊಬ್ಬನನ್ನು ಹೆದರುವ ಸ್ಥಿತಿ ಕಾಂಗ್ರೆಸ್ ನಲ್ಲಿದೆ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.

As one of India’s opposition parties, Congress needs to ask itself:

Why does the Emergency mindset remain?

Why are leaders who don’t belong to 1 dynasty unable to speak up?

Why are leaders getting frustrated in Congress?

Else, their disconnect with people will keep widening.

— Amit Shah (@AmitShah) June 25, 2020

ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಸಹ ಟ್ವೀಟ್ ಮಾಡಿ ತುರ್ತು ಪರಿಸ್ಥಿತಿ ತೆಗೆದುಹಾಕುವಲ್ಲಿ ಶ್ರಮಿಸಿದ ನಾಯಕರನ್ನು ಸ್ಮರಿಸಿ ನಾಗರಿಕ ಸ್ವಾತಂತ್ರ್ಯ ಪುನರ್ ಸ್ಥಾಪಿಸುವಲ್ಲಿ ಶ್ರಮಿಸಿದವರಿಗೆ ನಮನಗಳು ಎಂದಿದ್ದಾರೆ.ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯಗಳು ಎಂದು ಫೋಟೋ ಸಂದೇಶವನ್ನು ಕೂಡ ಹಾಕಿದ್ದಾರೆ.

भारत उन सभी महानुभावों को नमन करता है, जिन्होंने भीषण यातनाएं सहने के बाद भी आपातकाल का जमकर विरोध किया।

ये हमारे सत्याग्रहियों का तप ही था, जिससे भारत के लोकतांत्रिक मूल्यों ने एक अधिनायकवादी मानसिकता पर सफलतापूर्वक जीत प्राप्त की। pic.twitter.com/dhkEmmq18b

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com