ದೆಹಲಿಯಲ್ಲಿ ಜುಲೈ 31ರವರೆಗೆ ಶಾಲೆಗಳು ಬಂದ್: ಮುಂಬೈಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗರಿಷ್ಠ ಏರಿಕೆ

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ಬದಲಾಗದ ಹಿನ್ನೆಲೆಯಲ್ಲಿ ಜುಲೈ 31ರವರೆಗೂ ಶಾಲೆಗಳು ಬಾಗಿಲು ತೆರೆಯುವುದಿಲ್ಲ ಎಂದು ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಚ್ಚಿರುವ ಅಂಗಡಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿರುವ ಆರೋಗ್ಯ ಕಾರ್ಯಕರ್ತರು
ಮಹಾರಾಷ್ಟ್ರದಲ್ಲಿ ಮುಚ್ಚಿರುವ ಅಂಗಡಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುತ್ತಿರುವ ಆರೋಗ್ಯ ಕಾರ್ಯಕರ್ತರು

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ಬದಲಾಗದ ಹಿನ್ನೆಲೆಯಲ್ಲಿ ಜುಲೈ 31ರವರೆಗೂ ಶಾಲೆಗಳು ಬಾಗಿಲು ತೆರೆಯುವುದಿಲ್ಲ ಎಂದು ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಹೇಳಿದ್ದಾರೆ.

ಶಾಲೆಗಳನ್ನು ತೆರೆಯುವುದು ಕೇವಲ ತಾಂತ್ರಿಕ ಕೆಲಸವಲ್ಲಾ, ಬದಲಿಗೆ ಅದೊಂದು ಸೃಜನಾತ್ಮಕ ಕೆಲಸವಾಗಿದ್ದು, ಶಾಲೆಗಳಿಗೆ ಹೊಸ, ದೊಡ್ಡ ಜವಾಬ್ದಾರಿಯನ್ನು ನೀಡುತ್ತವೆ.ಜುಲೈ 31ರವರೆಗೆ ಶಾಲೆಗಳನ್ನು ತೆರೆಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಾಲೆಗಳ ಪುನರ್ ಆರಂಭ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ
ಶಿಕ್ಷಣ ಸಚಿವರು ಆಗಿರುವ ಮನಿಷ್ ಸಿಸೋಡಿಯಾ ಈ ವಿಚಾರವನ್ನು ತಿಳಿಸಿದ್ದಾರೆ.

ಮತ್ತೊಂದೆಡೆ ಮಹಾರಾಷ್ಟ್ರದಲ್ಲಿ ಇಂದು ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗರಿಷ್ಠ ಏರಿಕೆ ಕಂಡುಬಂದಿದೆ. ಇಂದು ಒಂದೇ ದಿನ 5024 ಕೋವಿಡ್-19 ಪ್ರಕರಣಗಳು ಕಂಡುಬಂದಿದ್ದು, 175 ಮಂದಿ ಸಾವನ್ನಪ್ಪಿದ್ದಾರೆ. 2362 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 1, 52, 765 ಮಂದಿಗೆ ಸೋಂಕು ತಗುಲಿದ್ದು, 7106 ಮಂದಿ ಸಾವನ್ನಪ್ಪಿದ್ದಾರೆ. 79 ಸಾವಿರದ 815 ಮಂದಿ ಗುಣಮುಖರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com