ಭಾಗಶಃ ಬಣ್ಣ ಕುರುಡುತನ ಹೊಂದಿರುವವರಿಗೂ ಚಾಲನಾ ಪರವಾನಗಿ: ಸರ್ಕಾರದ ಅಧಿಸೂಚನೆ

ದೇಶದಲ್ಲಿ ಸೌಮ್ಯ ಅಥವಾ ಭಾಗಶಃ ಬಣ್ಣ-ಕುರುಡುತನದಿಂದ ಬಳಲುತ್ತಿರುವವರಿಗೆ ಚಾಲನಾ ಪರವಾನಗಿ ನೀಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶುಕ್ರವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳ 1989ರ ಫಾರ್ಮ್ 1 ಮತ್ತು ಫಾರ್ಮ್ 1ಎಗೆ ತಿದ್ದುಪಡಿ ತರಲು ಅಧಿಸೂಚನೆ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಸೌಮ್ಯ ಅಥವಾ ಭಾಗಶಃ ಬಣ್ಣ-ಕುರುಡುತನದಿಂದ ಬಳಲುತ್ತಿರುವವರಿಗೆ ಚಾಲನಾ ಪರವಾನಗಿ ನೀಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶುಕ್ರವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳ 1989ರ ಫಾರ್ಮ್ 1 ಮತ್ತು ಫಾರ್ಮ್ 1ಎಗೆ ತಿದ್ದುಪಡಿ ತರಲು ಅಧಿಸೂಚನೆ ಹೊರಡಿಸಿದೆ.

ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆಯಲು 'ದಿವ್ಯಾಂಗವ್ಯಕ್ತಿ'ಯನ್ನು (ವಿಭಿನ್ನ ಸಾಮರ್ಥ್ಯ ಹೊಂದಿರುವವರು) ಶಕ್ತಗೊಳಿಸಲು ಸಚಿವಾಲಯ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ವಿಶೇಷವಾಗಿ ಚಾಲನಾ ಪರವಾನಗಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ರೂಪಿಸಲಾಗುತ್ತಿದೆ.

ದಿವ್ಯಾಂಗರಿಗೆ ಚಾಲನಾ ಪರವಾನಗಿಗೆ ಅನುಕೂಲವಾಗುವಂತೆ ಮತ್ತು ಏಕವರ್ಣದ ದೃಷ್ಟಿ ಹೊಂದಿರುವ ಜನರಿಗೆ ಈ ಹಿಂದೆ ಅನೇಕ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ.

ದೈಹಿಕ ಸಾಮರ್ಥ್ಯ(ಫಾರ್ಮ್ I) ಅಥವಾ ವೈದ್ಯಕೀಯ ಪ್ರಮಾಣಪತ್ರ(ಫಾರ್ಮ್ Iಎ) ಬಗ್ಗೆ ಘೋಷಣೆಯಲ್ಲಿನ ಅವಶ್ಯಕತೆಗಳಿಂದಾಗಿ ಬಣ್ಣ-ಕುರುಡು ನಾಗರಿಕರು ಚಾಲನಾ ಪರವಾನಗಿ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದರಿಂದ ವೈದ್ಯಕೀಯ ತಜ್ಞರ ಸಲಹೆಯೊಂದಿಗೆ ಈ ತಿದ್ದುಪಡಿ ತರಲಾಗಿದೆ.

ತಜ್ಞರ ನೀಡಿದ ಶಿಫಾರಸುಗಳಲ್ಲಿ, ಸೌಮ್ಯದಿಂದ ಮಧ್ಯಮ ಬಣ್ಣ-ಕುರುಡು ಹೊಂದಿರುವ ನಾಗರಿಕರಿಗೆ ವಾಹನ ಚಲಾಯಿಸಲು ಅವಕಾಶ ನೀಡುವುದು ಮತ್ತು ತೀವ್ರ ಬಣ್ಣ-ಕುರುಡು ಹೊಂದಿರುವ ನಾಗರಿಕರಿಗೆ ವಾಹನ ಚಲಾಯಿಸುವುದನ್ನು ನಿರ್ಬಂಧಿಸುವಂತೆ ಸಲಹೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com