ಕೋವಿಡ್-19 ಕೇವಲ ದೈಹಿಕ ಕಾಯಿಲೆ ಮಾತ್ರವಲ್ಲ, ಅದು ಜನರ ಜೀವನಕ್ಕೂ ಅಪಾಯವಾಗಿದೆ: ಪ್ರಧಾನಿ ಮೋದಿ

ಕೆಲವೊಂದು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್-19 ಸೋಂಕಿನ ವಿಚಾರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ, ಇಲ್ಲಿ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಕೆಲವೊಂದು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್-19 ಸೋಂಕಿನ ವಿಚಾರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ, ಇಲ್ಲಿ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರೆವೆರೆಂಡ್ ಡಾ ಜೋಸೆಫ್ ಮರ್ ಥೊಮ ಮೆಟ್ರೊಪೊಲಿಟನ್ ಅವರ 90ನೇ ಜನ್ಮದಿನಾಚರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಅನೇಕ ವಿಷಯಗಳನ್ನು ಹಂಚಿಕೊಂಡರು. ಡಾ ಜೋಸೆಫ್ ಮರ್ ಥೊಮ ತಮ್ಮ ಜೀವನವನ್ನು ಸಮಾಜ ಮತ್ತು ದೇಶದ ಒಳಿತಿಗಾಗಿ ಮುಡುಪಾಗಿಟ್ಟಿದ್ದಾರೆ. ಬಡತನ ನಿರ್ಮೂಲನೆ ಮತ್ತು ಮಹಿಳಾ ಸಶಕ್ತೀಕರಣ ಬಗ್ಗೆ ಅವರಿಗೆ ಅಪಾರವಾದ ಕಾಳಜಿಯಿದೆ. ಅವರ ಹುಟ್ಟುಹಬ್ಬಕ್ಕೆ ನಾನು ಶುಭಾಶಯ ತಿಳಿಸುತ್ತಿದ್ದು ಇನ್ನಷ್ಟು ವರ್ಷಗಳ ಕಾಲ ಆರೋಗ್ಯವಾಗಿ ಬಾಳಲಿ ಎಂದು ಆಶಿಸಿದರು.

ಇಂದು ಜಗತ್ತು ಕೋವಿಡ್-19 ವಿರುದ್ಧ ಹೋರಾಡುತ್ತಿದೆ. ಇದೊಂದು ಶಾರೀರಿಕ ಕಾಯಿಲೆ ಮಾತ್ರವಲ್ಲದೆ, ಜನರ ಜೀವಕ್ಕೆ ಕೂಡ ಅಪಾಯವಾಗಿದೆ.ಅನಾರೋಗ್ಯಕರ ಜೀವನಶೈಲಿ ಬಗ್ಗೆ ನಮ್ಮ ಗಮನವನ್ನು ಸೆಳೆಯುವಂತೆ ಮಾಡಿದೆ. ನಮ್ಮ ಕೊರೋನಾ ವಾರಿಯರ್ಸ್ ಗಳ ಶ್ರಮದಿಂದಾಗಿ ಭಾರತ ಕೊರೋನಾ ವಿರುದ್ಧ ದೃಢವಾಗಿ ಹೋರಾಡುತ್ತಿದೆ. ಇದರ ಪರಿಣಾಮ ಭಾರತದ ಮೇಲೆ ಗಂಭೀರವಾಗಬಹುದು ಎಂದು ಕೆಲವರು ಹೇಳುತ್ತಿದ್ದರು. ಆದರೆ ಭಾರತ ಅದನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದರು.

ಕಳೆದ ವಾರ ನಮ್ಮ ಸರ್ಕಾರ ದೇಶದ ಆರ್ಥಿಕತೆಗೆ ಸಂಬಂಧಪಟ್ಟಂತೆ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಹೇಳಿದೆ. ಸಾಗರದಿಂದ ಹಿಡಿದು ಅಂತರಿಕ್ಷದವರೆಗೆ, ಗದ್ದೆಯಿಂದ ಹಿಡಿದು ಫ್ಯಾಕ್ಟರಿಯವರೆಗೆ, ಜನಸ್ನೇಹಿ, ಬೆಳವಣಿಗೆ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಉತ್ತಮ ತಂತ್ರಜ್ಞಾನ, ಮೂಲಭೂತ ಸೌಕರ್ಯ ಮತ್ತು ಇದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮುಖ್ಯವಾಗಿದೆ. ಕೇರಳದ ಮೀನುಗಾರ ಸಹೋದರ-ಸಹೋದರಿಯರು ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು ಎಂಬ ವಿಶ್ವಾಸ ನನಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com