ಎಐಸಿಸಿ ಕಚೇರಿಗೂ ವಕ್ಕರಿಸಿದ ಕೊರೋನಾ ಸೋಂಕು: ಆತಂಕದಲ್ಲಿ ಕಾಂಗ್ರೆಸ್ ನಾಯಕರು

ದೇಶದಲ್ಲಿ ಕೊರೊನಾ ಸೋಂಕು ಆತಂಕ ತಂದಿದ್ದು, ಈಗ ಎಐಸಿಸಿ ಕಚೇರಿಗೂ ಕೊರೊನಾ ಭೀತಿ ಎದುರಾಗಿದೆ. ಕಚೇರಿಯ ಸಿಬ್ಬಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಕೆಲ ದಿನಗಳಿಂದ ಕಚೇರಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರಿಗೆ ಕರೋನ ಬೀತಿ ಕಾಡಲಾರಂಭಿಸಿದೆ. 
ಎಐಸಿಸಿ ಕಚೇರಿ (ಸಂಗ್ರಹ ಚಿತ್ರ)
ಎಐಸಿಸಿ ಕಚೇರಿ (ಸಂಗ್ರಹ ಚಿತ್ರ)

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಆತಂಕ ತಂದಿದ್ದು, ಈಗ ಎಐಸಿಸಿ ಕಚೇರಿಗೂ ಕೊರೊನಾ ಭೀತಿ ಎದುರಾಗಿದೆ. ಕಚೇರಿಯ ಸಿಬ್ಬಂದಿಯಲ್ಲಿ ಮಾರಕ ಸೋಂಕು ದೃಢಪಟ್ಟಿದ್ದು, ಕೆಲ ದಿನಗಳಿಂದ ಕಚೇರಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕರಿಗೆ ಕರೋನ ಬೀತಿ ಕಾಡಲಾರಂಭಿಸಿದೆ. 

ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೊರೊನಾ ವಿಪತ್ತು ಹಿನ್ನೆಲೆಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದ ಮೇರೆಗೆ ರಾಜ್ಯ ಕಾಂಗ್ರೆಸ್ ಸಮಿತಿಗಳು ಇಲ್ಲಿ ತೆರೆದಿದ್ದ ಕಂಟ್ರೋಲ್ ರೂಂಗೆ ಮಾಹಿತಿ ನೀಡುತ್ತಿದ್ದವು .

ಪ್ರತೀ ರಾಜ್ಯದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ವರದಿ ಪಡೆಯಲು ಕಂಟ್ರೋಲ್ ರೂಮ್ನಲ್ಲಿ ಹಲವರು ಕೆಲಸ ಮಾಡುತ್ತಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ ಎಐಸಿಸಿ ಕಚೇರಿ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಾರಕ ಕೊರೋನಾ ವೈರಸ್​ ಈಗ ಎಐಸಿಸಿ ಸಿಬ್ಬಂದಿಗೂ ವಕ್ಕರಿಸಿದೆ. ಸದ್ಯ ಕೊರೋನಾ ಸೋಂಕಿತ ಎಐಸಿಸಿ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಈತ ಕೆಲಸ ಮಾಡುತ್ತಿದ್ದ ಕಾರಣ ಈ ಎಐಸಿಸಿ ಕಚೇರಿಯನ್ನು ಸ್ಯಾನಿಟೈಸೇಷನ್​​ ಮಾಡಲಾಗುತ್ತಿದೆ.

ಇತ್ತೀಚೆಗೆ ಕಾಂಗ್ರೆಸ್​ ನಾಯಕ ಅಭಿಷೇಕ್ ಮನು ಸಿಂಘ್ವಿಗೆ ಸೋಂಕು ತಗುಲಿತ್ತು. ಕೋವಿಡ್-19 ಸೋಂಕು ದೃಢವಾಗುತ್ತಿದ್ದಂತೆಯೇ ಕಾಂಗ್ರೆಸ್​ನ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹೋಮ್​​ ಕ್ವಾರಂಟೈನ್​​ಗೆ ಒಳಗಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com