ಕಠಿಣ ಪರಿಸ್ಥಿಯಲ್ಲಿ ಕೇಂದ್ರವು 'ಲಾಭದಾಯಕತೆ'ಯನ್ನು ಆಶ್ರಯಿಸಿದೆ: ತೈಲ ಬೆಲೆ ಏರಿಕೆ ವಿರುದ್ಧ ಯಶವಂತ್ ಸಿನ್ಹಾ ಆರೋಪ 

ಇಂಧನ ಬೆಲೆಯನ್ನು ದಿನದಿನವೂ ಏರಿಸುವ ಮೂಲಕ ಕೇಂದ್ರ ಸರ್ಕಾರ "ಲಾಭದಾಯಕತೆ"ಯನ್ನು ಆಶ್ರಯಿಸುತ್ತಿದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ. 
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ

ಪಾಟ್ನಾ: ಇಂಧನ ಬೆಲೆಯನ್ನು ದಿನದಿನವೂ ಏರಿಸುವ ಮೂಲಕ ಕೇಂದ್ರ ಸರ್ಕಾರ "ಲಾಭದಾಯಕತೆ"ಯನ್ನು ಆಶ್ರಯಿಸುತ್ತಿದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ. 

ಒಂದು ಕಡೆ, ಆರ್ಥಿಕತೆ ಮೇಲೆತ್ತಲು ಕೇಂದ್ರವು 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದರೆ, ಮತ್ತೊಂದೆಡೆ, ಮೋಟಾರು ಬೈಕು, ಸ್ಕೂಟರ್ ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸುವ ಜನರನ್ನು "ದೋಚುತ್ತಿದೆ" ಸಿನ್ಹಾ ಹೇಳಿದ್ದಾರೆ. 

ಡೀಸೆಲ್ ದರವನ್ನು ಸತತ 21 ನೇ ದಿನಕ್ಕೆ ಹೆಚ್ಚಿಸಲಾಗಿದ್ದರೆ, ಮೂರು ವಾರಗಳಲ್ಲಿ 20 ಬಾರಿ ಪೆಟ್ರೋಲ್ ದರವನ್ನು ಹೆಚ್ಚಿಸಲಾಗಿದೆ.

"ಪೆಟ್ರೋಲ್ ಮತ್ತು ಡೀಸೆಲ್ (ಬೆಲೆ) ಏರಿಕೆ ಕಡ್ಡಾಯವಾದ ಸಂದರ್ಭಗಳಿವೆ. ಆದರೆ ನನ್ನ ಅನುಭವದ ಆಧಾರದ ಮೇಲೆ ನಾನು ನಿಮಗೆ ಹೇಳಬಲ್ಲೆ, ಅದು ಇಂದಿನ ಪರಿಸ್ಥಿತಿಗಳಲ್ಲಿ ಸಂಪೂರ್ಣ  "ಲಾಭದಾಯಕ" ಅಂಶವಾಗಿದೆ ಎಂದು ಸಿನ್ಹಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ಸರ್ಕಾರವು ಲಾಭದಾಯಕತೆಯನ್ನು ಆಶ್ರಯಿಸುತ್ತಿದೆ ಎನ್ನುವುದು  ದುರದೃಷ್ಟಕರ ಮತ್ತು ಖೇದಕರವಾಗಿದೆ" ಎಂದು ಅವರು ಹೇಳಿದರು.

"ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದೆ"

ಶನಿವಾರ, ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 25 ಪೈಸೆ ಮತ್ತು ಡೀಸೆಲ್‌ಗೆ 21 ಪೈಸೆ ಏರಿಕೆ ಮಾಡಲಾಗಿದ್ದು, ಮೂರು ವಾರಗಳಲ್ಲಿ ದರಗಳ ಹೆಚ್ಚಳ ಕ್ರಮವಾಗಿ 9.12 ಮತ್ತು 11.01 ರೂ. ಆಗಿದೆ.

ಜೂನ್ 7 ರಂದು, ತೈಲ ಕಂಪನಿಗಳು 82 ದಿನಗಳ ವಿರಾಮವನ್ನು ಕೊನೆಗೊಳಿಸಿದ ನಂತರ ವೆಚ್ಚಗಳಿಗೆ ಅನುಗುಣವಾಗಿ ಬೆಲೆ ಪರಿಷ್ಕರಣೆಯನ್ನು ಪುನಾರಂಭ ಮಾಡಿದೆ. ಈ ಸಮಯದಲ್ಲಿಅಂತರರಾಷ್ಟ್ರೀಯ ತೈಲ ದರಗಳ ಕುಸಿತದ ವಿರುದ್ಧ ಸರ್ಕಾರವು ಅಬಕಾರಿ ಸುಂಕ ಹೆಚ್ಚಳವನ್ನು ಸರಿಹೊಂದಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com