ಮನ್ ಕಿ ಬಾತ್ ನಲ್ಲಿ ಮಂಡ್ಯದ ಕೆರೆ ಕಾಮೇಗೌಡರ ಸ್ಮರಣೆ: ಕರ್ನಾಟಕದ ಅಳಿಗುಳಿ ಮನೆ ಆಟ ಆಡುವಂತೆ ಕರೆ ನೀಡಿದ ಮೋದಿ

ಮಂಡ್ಯದಲ್ಲಿ ಕೆರೆಗಳನ್ನು ನಿರ್ಮಿಸಿ ಹೆಸರಾಗಿರುವ ಕಾಮೇಗೌಡರ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಕೊಂಡಾಡಿದ್ದಾರೆ.
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಮಂಡ್ಯದಲ್ಲಿ ಕೆರೆಗಳನ್ನು ನಿರ್ಮಿಸಿ ಹೆಸರಾಗಿರುವ ಕಾಮೇಗೌಡರ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಕೊಂಡಾಡಿದ್ದಾರೆ.

ತಮ್ಮ 66 ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಅವರು, ಜಲ ರಕ್ಷಣೆಗೆ ಕಾಮೇಗೌಡರು ಬಹುದೊಡ್ಡ ಅಭಿಯಾನವನ್ನೇ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು ಕಾಮೇಗೌಡ. ತಂಡೆ ನೀಲಿ ವೆಂಕಟಗೌಡ. ತಾಯಿ ರಾಜಮ್ಮ. ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿಯಾಗಿದ್ದಾರೆ. ಚಿಕ್ಕಮನೆ, ತುಂಡು ಭೂಮಿ, ಒಂದಷ್ಟು ಕುರಿಗುಳು ಕಾಮೇಗೌಡರ ಆಸ್ತಿಯಾಗಿದೆ. 

ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕುರಿಗಾಹಿ 83 ವರ್ಷದ ಕಾಮೇಗೌಡ ಅವರದ್ದು ಕಾಡಿನಲ್ಲಿ ಕುರಿ ಮೇಯಿಸೋದೇ ಇವರ ಕಾಯಕ, ಹುಟ್ಟಿದಾಗಿನಿಂದಲೂ ಪರಿಸರದೊಂದಿಗೆ ತುಂಬಾ ಒಡನಾಟವಿಟ್ಟುಕೊಂಡಿರುವ ಅವರು, ಪರಿಸರಕ್ಕಾಗಿ ಜೀವನವಿಡೀ ದುಡಿದ ಹಣವನ್ನೇ ಖರ್ಚು ಮಾಡಿದ್ದಾರೆ. ಇದೂವರೆಗೂ 16 ಕೆರೆಗಳನ್ನು ನಿರ್ಮಿಸಿರುವ ಇವರು ವನ್ಯ ಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಜಲ ಸಂರಕ್ಷಣೆಯನ್ನೂ ಮಾಡುತ್ತಿದ್ದಾರೆ. 

ತಾನು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿರಬೇಕೆಂದು ಬೆಟ್ಟ ಸುತ್ತ 2 ಸಾವಿರಕ್ಕೂ ಅಧಿಕ ಗಿಡ ನೆಟ್ಟು ಬೆಳೆಸಿದ್ದಾರೆ. ತಾನು ನೆಟ್ಟ ಆ ಸಸಿಗಳು ಇಂದು ಮರವಾಗಿರುವುದನ್ನು ಕಂಡು ಆನಂದದಿಂದ ಸದಾ ಕಾಡಲ್ಲಿ ಸುತ್ತಾಡುತ್ತಾರೆ. ಜೊತೆಗೆ ಈತ ತನ್ನ ತಿಳುವಳಿಕೆಗೆ ಬಂದ ಕೆಲವು ಉತ್ತಮ ಸಂದೇಶ ಮತ್ತು ಪರಿಸರ ಕಾಳಜಿ ಸಂದೇಶಗಳನ್ನು ಬೆಟ್ಟದ ಬಂಡೆಯ ಮೇಲೆ ಬಣ್ಣದಿಂದ ಬರೆಸೋ ಮೂಲಕ ಜನರಲ್ಲಿ ಪರಿಸರ ಕಳಕಳಿ ಮೂಡಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com