ಚೀನಾ ಹೂಡಿಕೆ: ಬಿಹಾರದಲ್ಲಿ 2,900 ಕೋಟಿ ರೂ. ಮೌಲ್ಯದ ಸೇತುವೆ ಯೋಜನೆ ಕೇಂದ್ರದಿಂದ ರದ್ದು

ಚೀನಾ ಭಾರತ ಗಡಿ ಪ್ರದೇಶದಲ್ಲಿ ಘರ್ಷಣೆಯ ಪರಿಣಾಮವಾಗಿ ಭಾರತದಲ್ಲಿ ಚೀನಾ ಹೂಡಿಕೆಯಿರುವ ಅನೇಕ ಯೋಜನೆಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗ ಈ ಸಾಲಿಗೆ ಬಿಹಾರದ ಗಂಗಾ ನದಿಗೆ ಕಟ್ಟಬೇಕಾಗಿದ್ದ ಸೇತುವೆ ಯೋಜನೆಯೂ ಸೇರ್ಪಡೆಯಾಗಿದೆ. 
ಚೀನಾ ಹೂಡಿಕೆ: ಬಿಹಾರದಲ್ಲಿ 2,900 ಕೋಟಿ ರೂಪಾಯಿ ಮೌಲ್ಯದ ಸೇತುವೆ ಯೋಜನೆ ಕೇಂದ್ರದಿಂದ ರದ್ದು
ಚೀನಾ ಹೂಡಿಕೆ: ಬಿಹಾರದಲ್ಲಿ 2,900 ಕೋಟಿ ರೂಪಾಯಿ ಮೌಲ್ಯದ ಸೇತುವೆ ಯೋಜನೆ ಕೇಂದ್ರದಿಂದ ರದ್ದು

ಬಿಹಾರ: ಚೀನಾ ಭಾರತ ಗಡಿ ಪ್ರದೇಶದಲ್ಲಿ ಘರ್ಷಣೆಯ ಪರಿಣಾಮವಾಗಿ ಭಾರತದಲ್ಲಿ ಚೀನಾ ಹೂಡಿಕೆಯಿರುವ ಅನೇಕ ಯೋಜನೆಗಳನ್ನು ರದ್ದುಗೊಳಿಸಲಾಗುತ್ತಿದೆ. ಈಗ ಈ ಸಾಲಿಗೆ ಬಿಹಾರದ ಗಂಗಾ ನದಿಗೆ ಕಟ್ಟಬೇಕಾಗಿದ್ದ ಸೇತುವೆ ಯೋಜನೆಯೂ ಸೇರ್ಪಡೆಯಾಗಿದೆ. 

2,900 ಕೋಟಿ ರೂಪಾಯಿ ಮೌಲ್ಯದ ಸೇತುವೆ ಯೋಜನೆ ಇದಾಗಿದ್ದು, ಚೀನಾದ ಎರಡು ಸಂಸ್ಥೆಗಳು ಇದರಲ್ಲಿ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿದೆ. 

5.6 ಕಿ.ಮೀ ಉದ್ದದ ಬ್ರಿಡ್ಜ್ ನ ಯೋಜನೆಗಾಗಿ ಆಯ್ಕೆ ಮಾಡಲಾದ ನಾಲ್ಕು ಕಂಪನಿಗಳ ಪೈಕಿ ಎರಡು ಕಂಪನಿಗಳು ಇದ್ದವು ಈ ಕಾರಣದಿಂದ ಟೆಂಡರ್ ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ ಎಂದು ಬಿಹಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  2019 ರ ಡಿಸೆಂಬರ್ 16 ರಂದು ಈ ಯೋಜನೆಯನ್ನು ಅಂತಿಮಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com