ಕಡಲಿನಲ್ಲಿ ಚೀನಾದ ಚಟುವಟಿಕೆ ಪತ್ತೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಭಾರತದ ಏಳು ವಾರಗಳ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ನೌಕಾಪಡೆಯು ತನ್ನ ಕಣ್ಗಾವಲು ಕಾರ್ಯಗಳನ್ನು ಹೆಚ್ಚಿಸಿದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮರಾಭ್ಯಾಸ ಹೆಚ್ಚಾಗಿ ನಡೆಸಲಾಗುತ್ತಿದೆ ಎಂದು ಈ ಬೆಳವಣಿಗೆಯ ನಿಖರ ಮಾಹಿತಿ ಇರುವ ವ್ಯಕ್ತಿಗಳು ಹೇಳಿದ್ದಾರೆ. 
ಭಾರತೀಯ ನೌಕಾಪಡೆ
ಭಾರತೀಯ ನೌಕಾಪಡೆ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಭಾರತದ ಏಳು ವಾರಗಳ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ನೌಕಾಪಡೆಯು ತನ್ನ ಕಣ್ಗಾವಲು ಕಾರ್ಯಗಳನ್ನು ಹೆಚ್ಚಿಸಿದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮರಾಭ್ಯಾಸ ಹೆಚ್ಚಾಗಿ ನಡೆಸಲಾಗುತ್ತಿದೆ ಎಂದು ಈ ಬೆಳವಣಿಗೆಯ ನಿಖರ ಮಾಹಿತಿ ಇರುವ ವ್ಯಕ್ತಿಗಳು ಹೇಳಿದ್ದಾರೆ. 

ವೇಗವಾಗಿ ಬೆಳೆಯುತ್ತಿರುವ ಪ್ರಾದೇಶಿಕ ಭದ್ರತಾ ಕಾರ್ಯಾಚರಣೆ ದೃಷ್ಟಿಯಿಂದ ಭಾರತೀಯ ನೌಕಾಪಡೆ ಯುಎಸ್ ನೌಕಾಪಡೆ ಮತ್ತು ಜಪಾನ್ ಮ್ಯಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನಂತಹ ವಿವಿಧ ಮಿತ್ರರಾಷ್ಟ್ರಗಳ ನೌಕಾ ಪಡೆಗಳೊಂದಿಗೆ ತನ್ನ ಸಹಕಾರವನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು. ಶನಿವಾರ, ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಜಪಾನಿನ ನೌಕಾಪಡೆಯೊಂದಿಗೆ ನಿರ್ಣಾಯಕ ಸಮರಾಭ್ಯಾಸ ನಡೆಸಿತು, ಈ ಪ್ರದೇಶದಲ್ಲಿ ಚೀನಾದ ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳು ಆಗಾಗ್ಗೆ ದಾಳಿ ನಡೆಸುತ್ತಿವೆ ಎಂದು ಅವರು ಹೇಳಿದರು.

ಭಾರತೀಯ ನೌಕಾಪಡೆಯ ಹಡಗುಗಳಾದ ಐಎನ್‌ಎಸ್ ರಾಣಾ ಮತ್ತು ಐಎನ್‌ಎಸ್ ಕುಲಿಶ್ ಈ ಸಮರಾಭ್ಯಾಸ ಭಾಗವಾಗಿದ್ದರೆ, ಜಪಾನ್ ಮ್ಯಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್ ತನ್ನ ಎರಡು ಹಡಗುಗಳಾದ ಜೆಎಸ್ ಕಾಶಿಮಾ ಮತ್ತು ಜೆಎಸ್ ಶಿಮಾಯುಕಿಯನ್ನು ನಿಯೋಜಿಸಿತ್ತು.

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಭಾರತದ ಗಡಿ ಸಂಘರ್ಷಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ನೌಕಾಪಡೆಯ ಆಕ್ರಮಣಕಾರಿ ಕೆಲಸದ ನಡುವೆ  ಈ ಸಮರಾಭ್ಯಾಸ ಪ್ರಮುಖವಾಗಿದೆ.  "ಎರಡು ನೌಕಾಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು" ಎಂದು ಮೂಲವೊಂದು ತಿಳಿಸಿದೆ.

ಸಂಪನ್ಮೂಲ-ಸಮೃದ್ಧ ಪ್ರದೇಶದಲ್ಲಿ ಮಿಲಿಟರಿ ಪ್ರಭಾವವನ್ನು ವಿಸ್ತರಿಸಲು ಚೀನಾ ಸತತ  ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಯುಎಸ್, ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಫ್ರಾನ್ಸ್‌ನ ನೌಕಾಪಡೆಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುತ್ತಿವೆ

ಜೂನ್ 15 ರಂದು 20 ಭಾರತೀಯಸೈನಿಕರನ್ನು ಹತ್ಯೆ ಮಾಡಿದ ನಂತರ ಪೂರ್ವ ಲಡಾಕ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇದಾಗಿ ಸರ್ಕಾರವು ಎಲ್ಲಾ ಮೂರು ಪಡೆಗಳನ್ನು ಜಾಗೃತವಾಗಿರಲು ನಿರ್ದೇಶಿಸಿದೆ. ಚೀನಾದ ನೌಕಾಪಡೆಯು ನಿಯಮಿತವಾಗಿ ಆಕ್ರಮಣ ಮಾಡುತ್ತಿರುವ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಎಚ್ಚರಿಕೆಯ ಮಟ್ಟವನ್ನು ಹೆಚ್ಚಿಸಲು ಭಾರತೀಯ ನೌಕಾಪಡೆಗೆ ಸೂಚಿಸಲಾಗಿತ್ತು.  ಕಳೆದ ಎರಡು ವಾರಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತೀಯ ನೌಕಾಪಡೆ ತನ್ನ ಕಣ್ಗಾವಲು ಕಾರ್ಯಗಳನ್ನು ಹೆಚ್ಚಿಸಿದೆ ಮತ್ತು ಕಾರ್ಯಾಚರಣೆಯ ನಿಯೋಜನೆಯನ್ನು ಹೆಚ್ಚಿಸಿದೆ ಎಂದು ಮೇಲೆ ಉಲ್ಲೇಖಿಸಿದ ಜನರು ಹೇಳಿದ್ದಾರೆ.

"ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳನ್ನು ಪತ್ತೆಹಚ್ಚಲು ನಾವು ಕಣ್ಗಾವಲು ಹೆಚ್ಚಿಸುತ್ತಿದ್ದೇವೆ" ಎಂದು ಮಿಲಿಟರಿ ತಜ್ಞರು ಹೇಳಿದ್ದಾರೆ.

1967 ರ ನಾಥು ಲಾದಲ್ಲಿ ನಡೆದ ಘರ್ಷಣೆಯ ನಂತರದಲ್ಲಿ ಇದು ಬಹುಮುಖ್ಯ ಸಂಘರ್ಷವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com