ಜಮ್ಮು-ಕಾಶ್ಮೀರಕ್ಕೆ ಹೊಸ ನಿವಾಸತ್ವ ಕಾನೂನು ಅಸಂವಿಧಾನಿಕ ಮತ್ತು ಅಕ್ರಮ: ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದ ಹೊಸ ನಿವಾಸತ್ವ ಕಾನೂನು ಅಕ್ರಮ ಮತ್ತು ಅಸಂವಿಧಾನಿಕ, ಇದನ್ನು ಜಮ್ಮು-ಕಾಶ್ಮೀರದ ಜನತೆ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹೊಸ ನಿವಾಸತ್ವ ಕಾನೂನು ಅಕ್ರಮ ಮತ್ತು ಅಸಂವಿಧಾನಿಕ, ಇದನ್ನು ಜಮ್ಮು-ಕಾಶ್ಮೀರದ ಜನತೆ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಲೋಕಸಭಾ ಸದಸ್ಯ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಅಂಸವಿಧಾನಿಕ ಮತ್ತು ಅಕ್ರಮವಾಗಿರುವುದರ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಅದನ್ನು ನಾವು ಜಮ್ಮು-ಕಾಶ್ಮೀರದ ಜನತೆ ಒಪ್ಪಲು ಸಾಧ್ಯವಿಲ್ಲ, ಒಟ್ಟಾಗಿ ನಿಂತು ಹೋರಾಡುತ್ತೇವೆ, ಸದ್ಯ ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಸರಿಯಾಗಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದು ಹಾಕಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ನಂತರ ತರಲಾಗಿರುವ ಹೊಸ ವಾಸ ಕಾನೂನಿನ ಪ್ರಕಾರ 15 ವರ್ಷಗಳ ಕಾಲ ಜಮ್ಮು-ಕಾಶ್ಮೀರದಿಂದ ನೆಲೆಸಿರುವ ಶಾಶ್ವತರಹಿತ ನಿವಾಸಿಗಳು ಅಲ್ಲಿನ ವಾಸಿಗಳು ಎಂಬ ಪ್ರಮಾಣಪತ್ರ ಪಡೆಯಲು, ಸರ್ಕಾರದ ಇತರ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಸಂವಿಧಾನ ಪರಿಚ್ಛೇದ 370 ಮತ್ತು 35ಎ ಅಧಿಸೂಚನೆಯನ್ನು ರದ್ದುಗೊಳಿಸುವ ಮೊದಲು ಜಮ್ಮು-ಕಾಶ್ಮೀರದಲ್ಲಿ ಅಲ್ಲಿಯೇ ಹುಟ್ಟಿ ಬೆಳೆದ ಪ್ರಜೆಗಳು ಮಾತ್ರ ಭೂಮಿ ಖರೀದಿಸಬಹುದಾಗಿತ್ತು ಮತ್ತು ಸರ್ಕಾರಿ ನೌಕರಿ ಗಟ್ಟಿಸಿಕೊಳ್ಳಬಹುದಾಗಿತ್ತು. 

ಫಾರೂಕ್ ಅಬ್ದುಲ್ಲಾ ಇದರ ಜೊತೆಗೆ ಭಾರತ ಮತ್ತು ಚೀನಾ, ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮಾತುಕತೆಗೆ ಸಹ ಒಲವು ತೋರಿಸಿದರು. ಭಾರತ-ಚೀನಾ ಮತ್ತು ಭಾರತ-ಪಾಕಿಸ್ತಾನ ಮಧ್ಯೆ ಮಾತುಕತೆಯೊಂದೇ ಪರಿಹಾರ, ಯುದ್ಧ ಅಲ್ಲ ಎಂದು ಅಭಿಪ್ರಾಯಪಟ್ಟರು.

ಶ್ರೀನಗರ ಕ್ಷೇತ್ರದ ಸಂಸದರಾಗಿರುವ ಫಾರೂಕ್ ಅಬ್ದುಲ್ಲಾ, ಕಳೆದ ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಸಂವಿಧಾನ ಪರಿಚ್ಛೇದ 370 ರದ್ದುಗೊಳಿಸಿದ ನಂತರ ಅವರನ್ನು 8 ತಿಂಗಳ ಕಾಲ ಗೃಹ ಬಂಧನದಲ್ಲಿರಿಸಲಾಗಿತ್ತು, ಇತ್ತೀಚೆಗಷ್ಟೆ ಬಿಡುಗಡೆಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com