ಹೈದರಾಬಾದ್: ಕೊರೋನಾ ಗೆದ್ದರೂ ಮನೆಗೆ ಸೇರಿಸುತ್ತಿಲ್ಲ ಸಂಬಂಧಿಕರು!

ಹೈದರಾಬಾದ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಮಹಾಮಾರಿ ಕೊರೋನಾ ವೈರಸ್ ನಿಂದ ಸಂಪೂರ್ಣ ಗುಣಮುಖರಾಗಿದ್ದರೂ ಅವರ ರಕ್ತ ಸಂಬಂಧಿಕರು ತಮಗೆ ಸೋಂಕು ತಗುಲಬಹುದು ಎಂಬ ಭಯದಿಂದ ಅವರನ್ನು ಮನೆಗೆ ಸೇರಿಸುತ್ತಿಲ್ಲ ಎಂದು ಸೋಮವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಹೈದರಾಬಾದ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಮಹಾಮಾರಿ ಕೊರೋನಾ ವೈರಸ್ ನಿಂದ ಸಂಪೂರ್ಣ ಗುಣಮುಖರಾಗಿದ್ದರೂ ಅವರ ರಕ್ತ ಸಂಬಂಧಿಕರು ತಮಗೆ ಸೋಂಕು ತಗುಲಬಹುದು ಎಂಬ ಭಯದಿಂದ ಅವರನ್ನು ಮನೆಗೆ ಸೇರಿಸುತ್ತಿಲ್ಲ ಎಂದು ಸೋಮವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಾಂಧಿ ಆಸ್ಪತ್ರೆಯ ಕೊವಿಡ್-19 ನೋಡೆಲ್ ಅಧಿಕಾರಿ ಡಾ. ಪ್ರಭಾಕರ್ ರಾವ್ ಅವರ ಪ್ರಕಾರ, ಕೊರೋನಾದಿಂದ ಗುಣಮುಖರಾದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ಮನೆಗೆ ಕರೆದೊಯ್ಯಲು ಅವರ ಸಂಬಂಧಿಕರು ಒಪ್ಪುತ್ತಿಲ್ಲ. ಹೀಗಾಗಿ ಅವರನ್ನು ನೇಚರ್ ಕ್ಯೂರ್ ಆಸ್ಪತ್ರೆಯಲ್ಲಿರಸಲಾಗಿದೆ.

ಮನೆಗೆ ಬಂದರೆ ಮಕ್ಕಳಿಗೆ ಸೋಂಕು ತಗುಲಬಹುದು ಎಂಬ ಭಯದಿಂದ ಗುಣಮುಖರಾದವರನ್ನು ಅವರ ಸಂಬಂಧಿಕರು ಅಥವಾ ಕುಟುಂಬದವರು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಇಂತಹ 60 ಪ್ರಕರಣಗಳಿದ್ದವು. ಈ ಪೈಕಿ ನಾವು ಕೆಲವರಿಗೆ ತಿಳುವಳಿಕೆ ಹೇಳಿ, ಒಪ್ಪಿಸಿದ್ದೇವೆ. ಇನ್ನು 50 ಮಂದಿ ನೇಚರ್ ಕ್ಯೂರ್ ಆಸ್ಪತ್ರೆಯಲ್ಲಿದ್ದಾರೆ ಎಂದು ಪ್ರಭಾಕರ್ ತಿಳಿಸಿದ್ದಾರೆ.

ಚೇತರಿಸಿಕೊಂಡ ರೋಗಿಗಳಲ್ಲಿ ಕೆಲವರು 93 ವರ್ಷದ ಮಹಿಳೆ ಸೇರಿದಂತೆ ವಯಸ್ಸಾದವರಾಗಿದ್ದು, ಇನ್ನೂ ಗಾಂಧಿ ಆಸ್ಪತ್ರೆಯಲ್ಲಿದ್ದರೆ, ಉಳಿದವರನ್ನು ವಿವಿಧ ಕೇಂದ್ರಗಳಿಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com