ಮತ್ತೆ 53 ಬಿಎಸ್ಎಫ್ ಯೋಧರಿಗೆ ಕೊರೋನಾ, ಸೋಂಕಿತ ಯೋಧರ ಸಂಖ್ಯೆ 1,018ಕ್ಕೆ ಏರಿಕೆ

ಮಾರಕ ಕೊರೋನಾ ವೈರಸ್ ಸೋಂಕಿಗೆ ಮತ್ತೆ 53 ಮಂದಿ ಬಿಎಸ್ಎಫ್ ಯೋಧರು ತುತ್ತಾಗಿದ್ದು, ಆ ಮೂಲಕ ಕೊರೋನಾ ವೈರಸ್ ಸೋಂಕಿಗೆ ತುತ್ತಾದ ಬಿಎಸ್ಎಫ್ ಯೋಧರ ಸಂಖ್ಯೆ 1,018ಕ್ಕೆ ಏರಿಕೆಯಾಗಿದೆ.
ಬಿಎಸ್ಎಫ್
ಬಿಎಸ್ಎಫ್

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿಗೆ ಮತ್ತೆ 53 ಮಂದಿ ಬಿಎಸ್ಎಫ್ ಯೋಧರು ತುತ್ತಾಗಿದ್ದು, ಆ ಮೂಲಕ ಕೊರೋನಾ ವೈರಸ್ ಸೋಂಕಿಗೆ ತುತ್ತಾದ ಬಿಎಸ್ಎಫ್ ಯೋಧರ ಸಂಖ್ಯೆ 1,018ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಬಿಎಸ್ಎಫ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಈ ವರೆಗೂ ಕೊರೋನಾ ವೈರಸ್ ಸೋಂಕಿಗೆ ತುತ್ತಾದ ಸೋಂಕಿತ ಯೋಧರ ಸಂಖ್ಯೆ 1,018ಕ್ಕೆ ಏರಿಕೆಯಾಗಿದೆ. ಈ ಪೈಕಿ 659 ಮಂದಿ ಗುಣಮುಖರಾಗಿದ್ದು, 345 ಮಂದಿ ಯೋಧರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಮಂದಿ ಯೋಧರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಉಳಿದಂತೆ ದೇಶದಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ 5,66,840ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 18,522 ಮಂದಿಗೆ ಸೋಂಕು ಒಕ್ಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com